September 9, 2026
Wednesday, September 9, 2026
spot_img

50,000ಕ್ಕೂ ಹೆಚ್ಚು ಟಿಕೆಟ್ ಖಾಲಿ: ನ್ಯೂಝಿಲೆಂಡ್‌ನಲ್ಲೂ ಶುರುವಾಯ್ತು ‘ಇಂಡಿಯಾ ಎಫೆಕ್ಟ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ತಂಡದ ಕ್ರೇಜ್ ಎಂಥದ್ದು ಎಂದು ಯಾರಾದ್ರೂ ಕೇಳಿದ್ರೆ, ಈಗ ನ್ಯೂಝಿಲೆಂಡ್‌ ಕಡೆ ಬೆಟ್ಟು ಮಾಡಿ ತೋರಿಸಬಹುದು. ಮುಂಬರುವ ನ್ಯೂಝಿಲೆಂಡ್ ಪ್ರವಾಸಕ್ಕೆ ಭಾರತ ಪುರುಷರ ಕ್ರಿಕೆಟ್ ತಂಡ ಕಾಲಿಡುತ್ತಿದ್ದು, ಟಿಕೆಟ್ ಬುಕಿಂಗ್ ಓಪನ್ ಆದ ಕೇವಲ ಎರಡೇ ವಾರಗಳಲ್ಲಿ ಬರೊಬ್ಬರಿ 50,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಈ ವಿಷಯವನ್ನು ಸ್ವತಃ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಅನೌನ್ಸ್ ಮಾಡಿದ್ದು, ಅಲ್ಲಿನ ಕ್ರಿಕೆಟ್ ಪ್ರಿಯರ ಉತ್ಸಾಹ ನೋಡಿ ಬೆರಗಾಗಿದೆ.

ಸುಮಾರು ಆರು ವರುಷಗಳ ಸುದೀರ್ಘ ಕಾಯುವಿಕೆಯ ನಂತರ ಟೀಮ್ ಇಂಡಿಯಾ ಪೂರ್ಣ ಪ್ರಮಾಣದ ಸರಣಿಗಾಗಿ ಕಿವೀಸ್ ನಾಡಿಗೆ ಹೆಜ್ಜೆ ಇಡುತ್ತಿದೆ. ಅಲ್ಲಿನ ಜನ ಇದನ್ನು ಪ್ರೀತಿಯಿಂದ “ಇಂಡಿಯಾ ಎಫೆಕ್ಟ್” ಅಂತಲೇ ಕರೆಯುತ್ತಿದ್ದಾರೆ.

ಪ್ರಿ-ಸೇಲ್ ವಿಂಡೋ ಓಪನ್ ಆದ ಕೇವಲ 48 ಗಂಟೆಗಳಲ್ಲಿ 26,000 ಟಿಕೆಟ್‌ಗಳು ಸೇಲ್ ಆಗಿ ಹೋಗಿದ್ದವು. ಇನ್ನು ಸೆಪ್ಟೆಂಬರ್ 7 ರಿಂದ ಸಾರ್ವಜನಿಕರಿಗೆ ಟಿಕೆಟ್ ಖರೀದಿಸಲು ಮುಕ್ತ ಅವಕಾಶ ನೀಡಿದ್ದೇ ತಡ, ಟಿಕೆಟ್‌ಗಾಗಿ ಜನ ಮುಗಿಬಿದ್ದಿದ್ದಾರೆ. ಈಗಂತೂ ಒಟ್ಟು ಮಾರಾಟ 50 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ.

ಅಕ್ಟೋಬರ್ 30 ರಂದು ಆಕ್ಲೆಂಡ್‌ನ ಪ್ರಸಿದ್ಧ ಇಡನ್ ಪಾರ್ಕ್‌ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೆ ಡಿಮ್ಯಾಂಡ್ ಮಾಮೂಲಿ ಇಲ್ಲ. ಜನರ ನೂಕುನುಗ್ಗಲು ನಿಯಂತ್ರಿಸಲು ಕ್ರೀಡಾಂಗಣದ ಅತ್ಯುನ್ನತ ಮಟ್ಟದ 6ನೇ ಆಸನ ಶ್ರೇಣಿಯನ್ನೇ ತೆರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 2019ರ ಭಾರತ ಪ್ರವಾಸದ ನಂತರ ಈ ಗ್ಯಾಲರಿಯನ್ನು ಓಪನ್ ಮಾಡುತ್ತಿರುವುದು ಇದೇ ಮೊದಲು.

ಸರಣಿ ಶುರುವಾಗೋಕೆ ಇನ್ನು ಸಾಕಷ್ಟು ದಿನ ಬಾಕಿ ಇದ್ರೂ, ಕಿವೀಸ್ ನಾಡಿನಲ್ಲಿ ಕ್ರಿಕೆಟ್ ಫೀವರ್ ಈಗಾಗಲೇ ಪೀಕ್‌ನಲ್ಲಿದೆ. ನಮ್ಮ ಇಂಡಿಯನ್ ಸ್ಟಾರ್‌ಗಳ ಸಿಕ್ಸರ್-ಬೌಂಡರಿಗಳ ಅಬ್ಬರ ಮತ್ತು ನ್ಯೂಝಿಲೆಂಡ್‌ನ ಪಿಚ್‌ಗಳಲ್ಲಿನ ರೋಚಕ ಕಾದಾಟವನ್ನು ಕಣ್ಣುಂಬಿಕೊಳ್ಳಲು ಜಗತ್ತಿನಾದ್ಯಂತ ಇರೋ ಫ್ಯಾನ್ಸ್ ಕಾಯುತ್ತಿದ್ದಾರೆ. ಟಿಕೆಟ್ ಸೇಲ್ ಆಗ್ತಿರೋ ಸ್ಪೀಡ್ ನೋಡಿದ್ರೆ, ಸರಣಿಯ ಪ್ರತಿಯೊಂದು ಪಂದ್ಯವೂ ‘ಹೌಸ್‌ಫುಲ್’ ಆಗೋದ್ರಲ್ಲಿ ಡೌಟೇ ಇಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !