ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸೇರಿ ವಿವಿಧ ಫ್ರಾಂಚೈಸಿಗಳ 6.5 ಲಕ್ಷ ರೂ. ಮೌಲ್ಯದ 261 ಜೆರ್ಸಿ ಕಳ್ಳತನವಾಗಿದೆ. ಈ ಹಿನ್ನೆಲೆ ಮುಂಬೈ ಪೊಲೀಸರು ಕ್ರೀಡಾಂಗಣದ ಸೆಕ್ಯುರಿಟಿ ಗಾರ್ಡ್‌ನನ್ನು ಬಂಧಿಸಿದ್ದಾರೆ.
ಕ್ರೀಡಾಂಗಣದ ಸೆಕ್ಯುರಿಟಿ ಗಾರ್ಡ್ ಆಗಿರುವ ಪೂರ್ವ ಮೀರಾ ರಸ್ತೆಯ ನಿವಾಸಿ ಫಾರೂಕ್ ಅಸ್ಲಂ ಖಾನ್ (46) ಬಂಧಿತ ಆರೋಪಿ. ಜೂ.13ರಂದು ವಾಂಖೆಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐನ ಅಧಿಕೃತ ಮಳಿಗೆಗೆ ಅನುಮತಿಯಿಲ್ಲದೇ ಪ್ರವೇಶಿಸಿದ್ದರಿಂದ ಎಫ್‌ಐಆರ್ ದಾಖಲಾಗಿತ್ತು.
ಇತ್ತೀಚಿಗೆ ಬಿಸಿಸಿಐ ನಡೆಸುತ್ತಿದ್ದ ಲೆಕ್ಕಪರಿಶೋಧನೆ ವೇಳೆ ಸ್ಟಾಕ್ ಕಡಿಮೆಯಿರುವುದು ಪತ್ತೆಯಾಗಿದೆ. ಬಳಿಕ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭದ್ರತಾ ಸಿಬ್ಬಂದಿ ಕಾಡ್ಬೋರ್ಡ್ ಪೆಟ್ಟಿಗೆಯೊಂದನ್ನು ಹೊತ್ತೊಯ್ಯುತ್ತಿರುವುದು ಬೆಳಕಿಗೆ ಬಂದಿತ್ತು.