ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಿವೃತ್ತಿ ಕುರಿತಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಕಿಂಗ್ ಕೊಹ್ಲಿಯ 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯಗೊಂಡಂತಾಗಿದೆ.
ಬ್ಯಾಗಿ ಬ್ಲೂ ಧರಿಸಿ 14 ವರ್ಷ ಆಗಿದೆ. ಈ ಜರ್ನಿಯನ್ನು ಊಹೆ ಮಾಡೋದಕ್ಕೆ ಸಾಧ್ಯವಿಲ್ಲ.ಈ ಪ್ರಯಾಣ ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನಾನು ಜೀವನಪರ್ಯಂತ ಸಾಗಿಸುವ ಪಾಠಗಳನ್ನು ಕಲಿಸಿದೆ.
ಬಿಳಿ ಬಟ್ಟೆಯಲ್ಲಿ ಆಡೋ ಆಟಕ್ಕೆ ಅದರದ್ದೇ ವಿಶೇಷತೆ ಇದೆ, ಆ ಶಾಂತವಾದ ಜಂಜಾಟ, ದೀರ್ಘವಾದ ದಿನಗಳು, ಯಾರಿಗೂ ಕಾಣದ ಸಣ್ಣ ಕ್ಷಣಗಳು ನನ್ನೊಂದಿಗೆ ದೀರ್ಘವಾಗಿ ಇರಲಿವೆ.
ಇಲ್ಲಿಂದ ಹೊರಕ್ಕೆ ಬರೋದು ಸುಲಭ ಅಲ್ಲ, ಆದರೆ ನಾನು ಮಾಡ್ತಿರೋದು ಸರಿ ಎಂದು ಅನಿಸ್ತಾ ಇದೆ. ನನ್ನೆಲ್ಲಾ ಬೆಸ್ಟ್ ನೀಡಿದ್ದೇನೆ. ಕೃತಜ್ಞತೆಯಿಂದ ಒಂದು ಹಂತ ಮುಗಿಸಿದ್ದೇನೆ.
ಆಟಕ್ಕೆ, ಜೊತೆಗಾಗರರಿಗೆ, ಮೈದಾನಗಳಿಗೆ ತುಂಬ ಹೃದಯದ ಧನ್ಯವಾದಗಳು, ನನ್ನ ಟೆಸ್ಟ್ ಕ್ರಿಕೆಟ್ ಕರಿಯರ್ ನೆನೆಸಿಕೊಂಡಾಗ ಸಣ್ಣದೊಂದು ನಗು ನನ್ನ ಮುಖದಲ್ಲಿರುತ್ತದೆ. ಸೈನಿಂಗ್ ಆಫ್ ಎಂದಿದ್ದಾರೆ.
View this post on Instagram
ಕಳೆದ ವರ್ಷ ಚಾಂಪಿಯನ್ ಪಟ್ಟ ಗೆಲ್ಲುತ್ತಿದ್ದಂತೆ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕಿಂಗ್ ಕೊಹ್ಲಿ, ಇದೀಗ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದಾರೆ. ಎ+ ಶ್ರೇಣಿ ಆಟಗಾರನಾಗಿರುವ ಕೊಹ್ಲಿ ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯಲಿದ್ದಾರೆ.