ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಣಿ ಮುಳುಗಿ 27 ಮಂದಿ ಸಾವು ಮತ್ತು ಹಲವರು ನಾಪತ್ತೆಯಾಗಿರುವ ಘಟನೆ ಕಾಂಗೋದ ವಾಯುವ್ಯದಲ್ಲಿ ನಡೆದಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗೋ ನದಿಯ ಮೂಲಕ ಬೊಲಂಬ ಪಟ್ಟಣಕ್ಕೆ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸ್ಥಳೀಯ ದೋಣಿಯು ಇಕ್ವೆಟರ್ ಪ್ರಾಂತ್ಯದ ಎಂಬಂಡಾಕಾ ನಗರದಲ್ಲಿ ಶುಕ್ರವಾರ ತಡರಾತ್ರಿ ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಉಪ ಪ್ರಾಂತೀಯ ಗವರ್ನರ್ ಟೇಲರ್ ಎನ್ಗಾಂಜಿ ತಿಳಿಸಿದ್ದಾರೆ.
ಈ ಘಟನೆಯಿಂದಾಗಿ 27 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಮೃತ ದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಎಂಬಂಡಾಕಾದ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ಎನ್ಗಾಂಜಿ ಮಾಹಿತಿ ನೀಡಿದ್ದಾರೆ.
ಈ ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.