ಲಿಬಿಯಾದಲ್ಲಿ ತಾರಕಕ್ಕೇರಿದ ಘರ್ಷಣೆ: 27 ಸಾವು, 106 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ಸಶಸ್ತ್ರ ಬಣಗಳ ನಡುವೆ ಘರ್ಷಣೆಯಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಲಿಬಿಯಾದಲ್ಲಿ ನಡೆದಿದೆ.

ರಾಜಧಾನಿ ಟ್ರಿಪೋಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸೋಮವಾರ 444 ಬ್ರಿಗೇಡ್‌ನ ಕಮಾಂಡರ್ ಮಹಮೂದ್ ಹಮ್ಜಾ ಟ್ರಿಪೋಲಿಯ ಮುಖ್ಯ ಮಿಟಿಗಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ವೇಳೆ ಬಂಧನಕ್ಕೊಳಗಾದರು. ಆ ಬಳಿಕ ಹಿಂಸಾತ್ಮಕ ಘರ್ಷಣೆಗಳು ತಲೆದೋರಿವೆ. ಆತನ ಬಂಧನಕ್ಕೆ ಕಾರಣ ತಿಳಿದುಬಂದಿಲ್ಲ.

ಘರ್ಷಣೆ ಬಳಿಕ ರಾಜಧಾನಿಯಲ್ಲಿ ಬಾಂಬ್‌ ಸ್ಪೋಟದ ಹೊಗೆಯಾಡುತ್ತಿರುವ ದೃಶ್ಯಗಳು ವೈರಲ್‌ ಆಗುತ್ತಿವೆ. ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ, ನಿನ್ನೆಯಿಂದ ಟ್ರಿಪೋಲಿಯಲ್ಲಿ ನಡೆದ ಬೆಳವಣಿಗೆಗಳಿಂದಾಗಿ ನಾಗರಿಕ ಜನಸಂಖ್ಯೆಯ ಮೇಲೆ ಅವುಗಳ ಪ್ರಭಾವವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ನಾಗರಿಕರನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಎಲ್ಲಾ ಪಕ್ಷಗಳಿಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!