ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಸಂಜೆ 6 ರಿಂದ 7 ಗಂಟೆಯವರೆಗೆ ನಗರದಲ್ಲಿ 30.2 ಮಿ.ಮೀ ಮಳೆಯಾಗಿದ್ದು, 27ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿಗೂ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿರುವುದು ಮತ್ತು ಮರ ಉರುಳಿದ ಬಗ್ಗೆ ಕರೆಗಳು ಬಂದಿವೆ. ಭಾರೀ ಮಳೆಯ ನಂತರ ನಗರದಲ್ಲಿ 27 ಮರಗಳು, ಕೆಲವು ಭಾಗಗಳಲ್ಲಿ 94 ಕೊಂಬೆಗಳು ಧರೆಗುರುಳಿವೆ ಎಂದು ಬಿಬಿಎಂಪಿ ಅರಣ್ಯ ವಿಭಾಗ ಮಾಹಿತಿ ನೀಡಿದೆ.
ಮೈಸೂರು ರಸ್ತೆ, ನಾಗವಾರ, ಮಾರತಹಳ್ಳಿ, ತುಬರಹಳ್ಳಿ, ಕಸ್ತೂರಿ ನಗರ, ಬಾಲಗೆರೆ ಟಿ ಜಂಕ್ಷನ್, ಸ್ಪೈಸ್ ಗಾರ್ಡನ್ ಮತ್ತು ಇತರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 22.8 ಮಿ.ಮೀ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ 29.5 ಮಿ.ಮೀ ಮಳೆಯಾಗಿದೆ.