ಹೊಸದಿಗಂತ ವರದಿ ವಿಜಯಪುರ:
ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರ ವಲಯ ಶಿವಗಿರಿ ಬಳಿ ಇಂದು ನಡೆದಿದೆ.
ಇಲ್ಲಿನ ಶಿಕಾರಖಾನೆ ಓಣಿಯ ಲೋಹಿತ್ ಸಕ್ರೇಣ್ಣವರ (28) ಮೃತಪಟ್ಟ ಯುವಕ.
ಲೋಹಿತ್ ಸಕ್ರೇಣ್ಣವರ ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಗ್ಗದಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.