ವಯನಾಡ್ ಭೂಕುಸಿತದಲ್ಲಿ 298 ಜನರು ಸಾವು: ಸಂಸತ್ ನಲ್ಲಿ ಕೇಂದ್ರ ಸರ್ಕಾರ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತದಲ್ಲಿ ಒಟ್ಟು 298 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.

ಈ ಕುರಿತು ಮಾಹಿತಿ‌ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಭೂಕುಸಿತ ಸೇರಿದಂತೆ ವಿಪತ್ತುಗಳಿಂದ ಸಾವನ್ನಪ್ಪಿದವರ ಅಥವಾ ಕಾಣೆಯಾದವರ ಕೇಂದ್ರೀಯ ದತ್ತಾಂಶವನ್ನು ಕೇಂದ್ರವು ನಿರ್ವಹಿಸದಿದ್ದರೂ, ವಯನಾಡಿನಲ್ಲಿ ಭೂಕುಸಿತದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 298 ಎಂದು ಕೇರಳ ಸರ್ಕಾರ ತಿಳಿಸಿದೆ ಎಂದು ಹೇಳಿದ್ದಾರೆ.

ಈ ವೇಳೆ ಕೇಂದ್ರವು ರಾಜ್ಯಕ್ಕೆ ನೀಡಿದ ಪರಿಹಾರದ ಕುರಿತು ಮಾಹಿತಿ ನೀಡಿದ ರೈ, 2024 ರ ಭೂಕುಸಿತ, ಹಠಾತ್ ಪ್ರವಾಹಕ್ಕೆ ಅಂತರ ಸಚಿವಾಲಯದ ಕೇಂದ್ರ ತಂಡದ (IMCT) ವರದಿಯ ಆಧಾರದ ಮೇಲೆ 153.47 ಕೋಟಿ ರೂ.ಗಳನ್ನು ಅನುಮೋದಿಸಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!