ಹೊಸದಿಗಂತ ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್ ಬಳಿ ಗೂಡ್ಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಭಾನುವಾರ ಸಂಜೆ ಹೊತ್ತಿಗೆ ನಡೆದಿದೆ.
ನೆರೆಯ ಮಹಾರಾಷ್ಟ್ರದ ಪನವೆಲ್ ನಿಂದ ಆಂಧ್ರ ಪ್ರದೇಶದ ಗುಂತಕಲ್ ಕಡೆಗೆ ಹೊರಟಿದ್ದ ಡಿಸೇಲ್ ಟ್ಯಾಂಕರ್,ನ ಗೂಡ್ಸ್ ರೈಲು, ವಾಡಿ ರೈಲ್ವೆ ಜಂಕ್ಷನ್ ನಲ್ಲಿ ನಿಲ್ಲಿಸುವಾಗ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ.
ಅದೃಷ್ಟವಶಾತ್ ಹಳಿ ತಪ್ಪಿದ ರೈಲಿನಲ್ಲಿ ಯಾವುದೇ ರೀತಿಯ ಡಿಸೇಲ್ ಇರಲಿಲ್ಲ.ಹಳಿ ತಪ್ಪಿದ ತಕ್ಷಣವೇ ಅಲರ್ಟ್ ಆಗಿರುವ ರೇಲ್ವೆ ಸಿಬ್ಬಂದಿ, ತಪ್ಪಿದ ರೈಲಿನ ಮೂರು ಬೋಗಿಗಳನ್ನು ಸರಿಯಾಗಿ ಹಳಿಗೆ ತಂದು ನಿಲ್ಲಿಸಿದ್ದಾರೆ.
ಇನ್ನೂ ರೈಲಿನ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ.ಈ ಕುರಿತು ವಾಡಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.