February 8, 2026
Sunday, February 8, 2026
spot_img

‘3 ಡೋರ್ಸ್ ಡೌನ್’ ಗಾಯಕ ಬ್ರ್ಯಾಡ್ ಅರ್ಣೋಲ್ಡ್ ನಿಧನ: 47ನೇ ವಯಸ್ಸಿನಲ್ಲಿ ಸಂಗೀತ ಲೋಕಕ್ಕೆ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕ್ ಸಂಗೀತ ಪ್ರಿಯರಿಗೆ ದುಃಖದ ಸುದ್ದಿ ಬಂದಿದೆ. ‘3 Doors Down’ ಬ್ಯಾಂಡ್‌ನ ಮುಖ್ಯ ಗಾಯಕ ಬ್ರ್ಯಾಡ್ ಅರ್ಣೋಲ್ಡ್ 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ತಾವು ಸ್ಟೇಜ್-4 ಕಿಡ್ನಿ ಕ್ಯಾನ್ಸರ್‌ಗೆ ಒಳಗಾಗಿರುವುದಾಗಿ ಅವರು ಬಹಿರಂಗಪಡಿಸಿದ್ದರು. ಕುಟುಂಬದವರ ಮಧ್ಯೆ ಶಾಂತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಬ್ಯಾಂಡ್ ಅಧಿಕೃತವಾಗಿ ತಿಳಿಸಿದೆ.

1995ರಲ್ಲಿ ಮಿಸಿಸಿಪಿಯಲ್ಲಿ ಆರಂಭವಾದ ‘3 Doors Down’ ಬ್ಯಾಂಡ್‌ಗೆ 1999ರಲ್ಲಿ ಬಿಡುಗಡೆಯಾದ ‘Kryptonite’ ಹಾಡು ದೊಡ್ಡ ಗುರುತು ತಂದುಕೊಟ್ಟಿತು. ನಂತರ ಬಂದ ‘The Better Life’ ಆಲ್ಬಮ್ ಭಾರೀ ಯಶಸ್ಸು ಕಂಡು ಲಕ್ಷಾಂತರ ಪ್ರತಿಗಳು ಮಾರಾಟವಾದವು.

ಇದನ್ನೂ ಓದಿ:

‘When I’m Gone’ ಹಾಡಿಗೆ ಗ್ರ್ಯಾಮಿ ನಾಮಿನೇಷನ್ ಕೂಡ ಸಿಕ್ಕಿದ್ದು, ಅವರ ಸಂಗೀತ ವೃತ್ತಿಗೆ ಮತ್ತಷ್ಟು ಪ್ರಭಾವ ತಂದಿತು. ಸರಳ ಪದಗಳಲ್ಲಿ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುವ ಶೈಲಿಯಿಂದ ಬ್ರ್ಯಾಡ್ ಯುವಕರ ಮನಸ್ಸಿಗೆ ಹತ್ತಿರವಾಗಿದ್ದರು. ‘Loser’, ‘Be Like That’ ಸೇರಿದಂತೆ ಹಲವಾರು ಹಾಡುಗಳು ಜನಪ್ರಿಯವಾಗಿದ್ದು, ರಾಕ್ ಸಂಗೀತದಲ್ಲಿ ಅವರ ಹೆಸರು ಸದಾ ನೆನಪಿನಲ್ಲಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !