ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಟವಾಡುತ್ತಿದ್ದ ವೇಳೆ ಮೈಮೇಲೆ ಗೇಟ್ ಬಿದ್ದ ಹಿನ್ನೆಲೆ ಮಗು ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಪಡುಕರೆಯಲ್ಲಿ ನಡೆದಿದೆ.
ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು.
ಮಂಗಳವಾರದಂದು ಮಗು ಸುಶಾಂತ್ ಮನೆಯ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿತ್ತು. ಈ ವೇಳೆ ಅಚಾನಕ್ ಆಗಿ ಗೆಸ್ಟ್ ಹೌಸ್ನ ಗೇಟ್ ಕಳಚಿ ಬಿದ್ದಿದ್ದು, ಆಟವಾಡುತ್ತಿದ್ದ ಮಗುವಿನ ಮೇಲೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಗು ಕೊನೆಯುಸಿರೆಳೆದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.