ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಜೀವನ ಶೈಲಿಯಲ್ಲಿ ಜಂಕ್ ಫುಡ್, ಸಿಹಿ ಪಾನೀಯಗಳು, ಪ್ಯಾಕ್ ಮಾಡಿದ ತಿಂಡಿಗಳು ನಿತ್ಯದ ಭಾಗವಾಗಿಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಅನೇಕರು ತಮ್ಮ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಲು “30 ದಿನಗಳ ನೋ ಶುಗರ್ ಚಾಲೆಂಜ್” ಅನ್ನು ಆಯ್ಕೆ ಮಾಡುತ್ತಿದ್ದಾರೆ. ಸಕ್ಕರೆಯನ್ನು ಸಂಪೂರ್ಣವಾಗಿ ದೂರವಿಸುವ ಈ ಚಾಲೆಂಜ್ ದೇಹವನ್ನು ಡಿಟಾಕ್ಸ್ ಮಾಡಲು, ಶಕ್ತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ಸಹಾಯಕವಾಗುತ್ತದೆ. ಈ ಚಾಲೆಂಜ್‌ನಲ್ಲಿ ಬಿಳಿ ಸಕ್ಕರೆ, ಸ್ವೀಟ್ಸ್, ಸಿಹಿ ಪಾನೀಯಗಳು, ಸಂಸ್ಕರಿತ ಫುಡ್‌ಗಳನ್ನ 30 ದಿನ ಸಂಪೂರ್ಣವಾಗಿ ತಪ್ಪಿಸಬೇಕು.
ಸಕ್ಕರೆ ತಿನ್ನೋದು ಬಿಟ್ರೆ ಏನ್ ಲಾಭ ಇದೆ?
- ಸಕ್ಕರೆ ತಿನ್ನೋದು ಕಡಿಮೆ ಮಾಡಿದಾಗ ಹೊಟ್ಟೆ ಉಬ್ಬರ ಕಡಿಮೆಯಾಗಿ, ಗಟ್ ಬ್ಯಾಕ್ಟೀರಿಯಾ ಆರೋಗ್ಯಕರವಾಗಿ ಬೆಳೆಯುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತೆ.
- ಸಕ್ಕರೆ ತಪ್ಪಿಸಿದಾಗ ಫಾಸ್ಟ್ ಫುಡ್ ಹಂಬಲ ಕಡಿಮೆಯಾಗುತ್ತೆ. ಇದರ ಪರಿಣಾಮವಾಗಿ ಉತ್ತಮ ಪೋಷಕಾಂಶಗಳುಳ್ಳ ಆಹಾರ ಸೇವನೆ ಹೆಚ್ಚುತ್ತದೆ.
- ಕ್ಯಾಲೊರಿ ಇಂಟೇಕ್ ಕಡಿಮೆಯಾದರೂ, ಫೈಬರ್ ಮತ್ತು ಪ್ರೋಟೀನ್ ಹೆಚ್ಚಾಗಿ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ. ಆಯಾಸವೂ ಕಡಿಮೆಯಾಗುತ್ತದೆ.
- ಸಕ್ಕರೆ ರಹಿತ ತಿಂಡಿ ಚರ್ಮವನ್ನು ಕ್ಲೀನ್ ಮಾಡುತ್ತದೆ. ಒತ್ತಡ ಕಡಿಮೆಯಾಗಿ, ರಾತ್ರಿ ಒಳ್ಳೆಯ ನಿದ್ರೆ ಬರುತ್ತೆ.

