June 22, 2026
Monday, June 22, 2026
spot_img

VIROSH | ಸೊಸೆಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಜಯ್ ತಾಯಿ, ಏನದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಸಿನಿರಂಗದಲ್ಲಿ ಬಹುಕಾಲದಿಂದ ಚರ್ಚೆಯಾಗುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಸಂಭ್ರಮ ಇದೀಗ ಅದ್ಧೂರಿಯಾಗಿ ಆರಂಭವಾಗಿದೆ. ರಾಜಸ್ಥಾನದ ಉದಯಪುರದಲ್ಲಿರುವ ಐಶಾರಾಮಿ ರೆಸಾರ್ಟ್‌ನಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮಗಳು ನೆರವೇರಿವೆ. ಮೆಹಂದಿ, ಹಳದಿ ಮತ್ತು ಸಂಗೀತ್ ಸಮಾರಂಭಗಳು ಉತ್ಸಾಹಭರಿತವಾಗಿ ನಡೆದಿವೆ.

ಸಂಗೀತ್ ವೇಳೆ ವಿಶೇಷ ಕ್ಷಣವೂ ಕಂಡುಬಂತು. ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ, ತಮ್ಮ ಕುಟುಂಬದಲ್ಲಿ ತಲೆಮಾರುಗಳಿಂದ ಸೊಸೆಗೆ ನೀಡಲಾಗುತ್ತಿದ್ದ ಚಿನ್ನದ ಬಳೆಗಳನ್ನು ರಶ್ಮಿಕಾಗೆ ಉಡುಗೊರೆಯಾಗಿ ನೀಡಿದರು. ಕುಟುಂಬ ಪರಂಪರೆಯ ಪ್ರತೀಕವಾಗಿರುವ ಈ ಅಮೂಲ್ಯ ಬಳೆಗಳನ್ನು ಸ್ವೀಕರಿಸಿದ ರಶ್ಮಿಕಾ ಭಾವುಕರಾಗಿ ಕಣ್ಣೀರು ಹಾಕಿದರೆಂದು ತಿಳಿದುಬಂದಿದೆ.

ಇದನ್ನೂ ಓದಿ:

ವಿಜಯ್ ಕುಟುಂಬದೊಂದಿಗೆ ರಶ್ಮಿಕಾಗೆ ಹೊಸ ಪರಿಚಯವಲ್ಲ. ಕಳೆದ ಕೆಲವು ವರ್ಷಗಳಿಂದ ಹಬ್ಬ-ಹರಿದಿನಗಳನ್ನು ಅವರು ದೇವರಕೊಂಡ ಕುಟುಂಬದೊಂದಿಗೆ ಆಚರಿಸುತ್ತಿದ್ದಾರೆ. ಈ ಆತ್ಮೀಯತೆ ಮುಂದಿನ ದಾಂಪತ್ಯ ಜೀವನಕ್ಕೂ ಬಲ ನೀಡಲಿದೆ ಎಂಬುದು ಕುಟುಂಬ ವಲಯದ ಅಭಿಪ್ರಾಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !