ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಹೊರವಲಯದ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ಸುತ್ತಮುತ್ತಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅಂಬರ ವ್ಯಾಲಿ ಶಾಲೆ ಹಿಂಭಾಗದ ಪ್ರದೇಶ, ಶಕ್ತಿ ನಗರ, ಕದ್ರಿ ಮಿದ್ರಿ, ಮೂಗ್ತಿಹಳ್ಳಿ ಸಮೀಪದ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. ಬೇಲೂರಿನ ಕಾಡಿನಲ್ಲಿದ್ದ ಬೀಟಮ್ಮ ಆನೆ ಕೂಡ ಕಾಣಿಸಿಕೊಂಡಿದೆ.
ಈಗಾಗಲೇ ಅರಣ್ಯ ಇಲಾಖೆ ಜನರಿಗೆ ಒಂಟಿಯಾಗಿ ಓಡಾಡುವುದು, ಆನೆಗಳಿರುವ ಸುತ್ತಮುತ್ತಲಿನ ಪ್ರದೇಶಗಳ ಬಳಿ ಕಾಣಿಸಿಕೊಳ್ಳದಂತೆ ಅರಿವು ಮೂಡಿಸಿದ್ದಾರೆ. ಆನೆಗಳು ಬೀಡುಬಿಟ್ಟಿರುವ ಸ್ಥಳದಿಂದ ಜನರಿರುವ ರಸ್ತೆಗಳನ್ನು ಸಂಪರ್ಕಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ.