ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಮುಂದೆ ಶರಣಾದ 30 ನಕ್ಸಲೀಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 30 ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಅವರಲ್ಲಿ 9 ಮಂದಿಗಳ ತಲೆ ರೂ. 39 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಮಂದಿ ಮಹಿಳೆಯರು ಒಳಗೊಂಡ ನಕ್ಸಲೀಯರು, ಪೊಲೀಸ್ ಮತ್ತು ಸಿಆರ್ ಪಿಎಫ್ ನ ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದು, ಆದಿವಾಸಿಗಳ ಮೇಲೆ ಮಾವೋವಾದಿಗಳು ನಡೆಸಿದ ದೌರ್ಜನ್ಯ ಮತ್ತು ಟೊಳ್ಳಾದ ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡಿದ್ದೇವೆ ಎಂದು ಅವರು ಹೇಳಿರುವುದಾಗಿ ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶರಣಾದ 30 ಕಾರ್ಯಕರ್ತರಲ್ಲಿ ಇಬ್ಬರ ತಲೆಗೆ ತಲಾ 8 ಲಕ್ಷ ರೂ..ಮೂವರ ತಲೆಗೆ ತಲಾ 5, ಮತ್ತೆ ಇನ್ನೂ ಮೂವರ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ನಕ್ಸಲೀಯರಿಗೆ ತಲಾ 25,000 ರೂಪಾಯಿ ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಪುನರ್ವಸತಿ ಕಲ್ಪಿಸಲಾಗುವುದು, ಜಿಲ್ಲೆಯಲ್ಲಿ ಈ ವರ್ಷ 76 ನಕ್ಸಲೀಯರು ಹಿಂಸಾಚಾರವನ್ನು ತೊರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!