ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ, ಜೆಡಿಎಸ್ ನಿಂದ 30 ಮಂದಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರುವ ಕೆಲವರ ಹೆಸರು ಹೇಳಿದರೆ ವಿಪಕ್ಷ ನಾಯಕ ಆರ್.ಅಶೋಕ್ ಶಾಕ್ ಆಗುತ್ತೆ, ಸುಮ್ಮನೆ ಇದನ್ನೆಲ್ಲಾ ಬಿಟ್ಟು ಚುನಾವಣೆ ಸಿದ್ಧತೆ ಮಾಡಿಕೊಂಡು ಬರಲಿ ಎಂದು ತಿರುಗೇಟು ನೀಡಿದರು.
ನಮ್ಮ ಪಕ್ಷದಲ್ಲಿ ಆಪರೇಷನ್ ಮಾಡುತ್ತಿಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಸಂಶೋಧನಾ ಕಾರ್ಯದ ಪರಿಚಯವಾದ ನಂತರ ನಮ್ಮ ಪಕ್ಷಕ್ಕೆ ಬರುತ್ತಾರೆ. ಬಿಜೆಪಿ, ಜೆಡಿಎಸ್ ನಿಂದ 30 ಮಂದಿ ಕಾಂಗ್ರೆಸ್ ಸೇರಿದರೆ ಚುನಾವಣೆಗೂ ಮುನ್ನವೇ ಕರೆದುಕೊಳ್ಳಬೇಕಾ..? ಅಥವಾ ಚುನಾವಣೆ ಮುಗಿದ ನಂತರ ಕರೆ ಮಾಡಬೇಕಾ ಎಂದು ಯೋಚಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.