ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ವಾಹನ ಚಾಲನಾ ತರಬೇತಿಗೆ ಆಗಮಿಸಿದ್ದ 35 ಸೈನಿಕರು ಮಧ್ಯಾಹ್ನದ ಊಟ ಸೇವಿಸಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಅಸ್ವಸ್ಥ ಸೈನಿಕರನ್ನು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ಚಾಲನಾ ತರಬೇತಿಗಾಗಿ ಬಂದಿದ್ದ ಸೈನಿಕರು ಕುಡುಗರಹಳ್ಳಿಯ ಕ್ಯಾಂಪ್ ನಲ್ಲಿ ತಂಗಿದ್ದರು. ಮಧ್ಯಾಹ್ನ ಕ್ಯಾಂಪ್ ನಲ್ಲಿ ತಯಾರಿಸಿದ್ದ ಊಟ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.