ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಸಾಮಾನ್ಯವಾಗಿ ಹರಾಜಿನಲ್ಲಿ ವಿಶೇಷ ವಸ್ತುಗಳಿಗೆ ಹೆಚ್ಚಿನ ಬೆಲೆಗಳನ್ನು ನೀಡಿ ಖರೀದಿಸುವುದನ್ನ ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಭಕ್ತರು ದೇವರ ಮುಂದೆ ಇಟ್ಟಿದ್ದ ಕೇವಲ ಒಂದು ನಿಂಬೆಹಣ್ಣಿಗೆ 35 ಸಾವಿರ ರೂ. ನೀಡಿ ಹರಾಜಿನಲ್ಲಿ ಖರೀದಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈರೋಡ್ನಿಂದ 35 ಕಿಮೀ ದೂರದಲ್ಲಿರುವ ಶಿವಗಿರಿ ಗ್ರಾಮದ ಪಳಪೂಸಾಯಿನ್ ದೇವಸ್ಥಾನದಲ್ಲಿ ಇಂತಹ ಘಟನೆ ನಡೆದಿದೆ. ದೇವರ ಮುಂದೆ ಪೂಜಿಸಲ್ಪಟ್ಟ ನಿಂಬೆಹಣ್ಣನ್ನು ಖರೀದಿಸುವ ವ್ಯಕ್ತಿಯು ಸಂಪತ್ತು, ಆರೋಗ್ಯ ಮತ್ತು ಸಂತೋಷವನ್ನು ಸಾಧಿಸಬಹುದು ಎಂದು ನಂಬಲಾಗಿದೆ.
ಈ ನಿಟ್ಟಿನಲ್ಲಿ 15 ಭಕ್ತರು ಶಿವರಾತ್ರಿಯ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಅದರಲ್ಲೊಬ್ಬ ಭಕ್ತ ಒಂದು ನಿಂಬೆಹಣ್ಣಿಗೆ 35,000 ನೀಡಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.