ದೇಶದಲ್ಲಿ 3ನೇ ಬಾರಿ ಮೋದಿ ದರ್ಬಾರ್: ಚೀನಾ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಕ್ಷಣ ಚೀನಾ ಕೂಡ ಎನ್ ಡಿಎ ಗೆಲುವಿನ ಅಭಿನಂದನೆ ಸಲ್ಲಿಸಿದೆ.

ಭಾರತದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ನಾವು ಗಮನಿಸಿದ್ದೇವೆ ಹಾಗೂ ಮೋದಿ ಹಾಗೂ ಎನ್ ಡಿಎ ಮೈತ್ರಿಕೂಟದ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್ ಹೇಳಿದ್ದಾರೆ.

ಆರೋಗ್ಯಕರ ಮತ್ತು ಸ್ಥಿರವಾದ ಚೀನಾ-ಭಾರತ ಸಂಬಂಧವು ಎರಡೂ ದೇಶಗಳ ಹಿತಾಸಕ್ತಿಯಲ್ಲಿದೆ ಮತ್ತು ಈ ಪ್ರದೇಶದಲ್ಲಿ ಮತ್ತು ಅದರಾಚೆಗೆ ಶಾಂತಿ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಿದೆ ಎಂದು ಮಾವೋ ಹೇಳಿಕೆ ನೀಡಿದ್ದಾರೆ.

ಎರಡೂ ದೇಶಗಳು ಮತ್ತು ಎರಡು ದೇಶದ ಜನತೆಯ ಮೂಲಭೂತ ಹಿತಾಸಕ್ತಿಗಳಲ್ಲಿ ಕಾರ್ಯನಿರ್ವಹಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ, ನಮ್ಮ ಸಂಬಂಧಗಳ ಒಟ್ಟಾರೆ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಭವಿಷ್ಯದತ್ತ ಗಮನಹರಿಸಿ ಆರೋಗ್ಯಕರ ಮತ್ತು ಸ್ಥಿರವಾದ ಹಾದಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸುತ್ತದೆ ಎಂದು ಚೀನಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!