ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ಭಾರತದ ಮೇಘಾಲಯದಲ್ಲಿ ಸೋಮವಾರ ಮುಂಜಾನೆ ಭೂಕಂಪ ಸಂಭವಿಸಿದೆ ಎಂದು ಭಾರತೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.
ಮೇಘಾಲಯದ ಈಶಾನ್ಯ ಭಾಗದಲ್ಲಿ 43 ಕಿಮಿ ದೂರವಿರುವ ತುರಾ ಪ್ರದೇಶದಲ್ಲಿ ಮುಂಜಾನೆ 6.30ರ ಸುಮಾರಿಗೆ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ, ಭೂಕಂಪದ ಕೇಂದ್ರವು 10 ಕಿಮಿ ಆಳದಲ್ಲಿ ಕಂಡುಬಂದಿದೆ ಎಂದು ಭೂಕಂಪ ಮಾಪನ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.