ದಿಗಂತ ವರದಿ ವಿಜಯಪುರ:
ದಾಖಲೆ ಇಲ್ಲದ 4.40 ಲಕ್ಷ ಹಣ ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಚೆಕ್ ಪೊಸ್ಟ್’ನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಇಲ್ಲಿನ ಚೆಕ್ ಪೊಸ್ಟ್ ಬಳಿ ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಹಣ ಸಾಗಿಸುವಾಗ ತಪಾಸಣೆ ವೇಳೆ ಹಣ ಪತ್ತೆಯಾಗಿದ್ದು, ದಾಖಲೆ ಇಲ್ಲದಕ್ಕೆ, ಹಣ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬೀದರ್ ಮೂಲದ ಅನಿಲ್ ಕುಮಾರ ರಾಠೋಡ (35) ವಶಕ್ಕೆ ಪಡೆಯಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.