ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 7 ಹಾಗೂ 8 ರಂದು ಪ್ರಧಾನಿ ಮೋದಿ ಬಿಡುವಿಲ್ಲದೆ 4 ರಾಜ್ಯ ಪ್ರವಾಸ ಮಾಡಲಿದ್ದಾರೆ. ನಾಲ್ಕು ರಾಜ್ಯದ 5 ಪ್ರಮುಖ ನಗರಗಳಲ್ಲಿ 50ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ. ಒಟ್ಟು 50,000 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಜುಲೈ 7 ರಂದು ಪ್ರಧಾನಿ ಮೋದಿ ದೆಹಲಿಯಿಂದ ರಾಯ್‌ಪುರ್ ತೆರಳಲಿದ್ದಾರೆ. ರಾಯ್‌ಪುರ್ ವಿಶಾಖಪಟ್ಟಂ ಕಾರಿಡಾರ್, ಆರ್ ಲೇನ್ ರಸ್ತೆ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಯ್‌ಪುರದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಆಗಮಿಸಲಿದ್ದಾರೆ. ಗೀತಾ ಪ್ರೆಸ್‌ನಲ್ಲಿನ ಕಾರ್ಯಕ್ರಮ, 3 ವಂದೇ ಭಾರತ್ ರೈಲು ಯೋಜನೆಗೆ ಚಾಲನೆ, ಗೋರಖ್‌ಪುರ ರೈಲು ನಿಲ್ದಾಣ ಪುನರಾಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಬಳಿಕ ಗೋರಖ್‌ಪುರದಿಂದ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಸೋನ್ ನಗರಕ್ಕೆ ಸರಕು ಸಾಗಾಣೆ ಕಾರಿಡಾರ್ ಹೊಸ ಮಾರ್ಗ, ವಾರಣಾಸಿ ಜೌನ್‌ಪುರ್ 4 ಲೇನ್ ಅಗಲೀಕರಣ,ಮಣಿಕರ್ಣಿಕಾ ಘಾತ್ ಹಾಗೂ ಹರಿಶ್ಚಂದ್ರ ಘಾಟ್ ನವೀಕರಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಆ ಬಳಿಕ ಜುಲೈ 7 ರಂದು ರಾತ್ರಿ ವಾರಣಾಸಿಯಲ್ಲಿ ಮೋದಿ ತಂಗಲಿದ್ದಾರೆ. ಜುಲೈ 8 ರಂದು ಬೆಳಗ್ಗೆ ವಾರಣಿಸಿಯಿಂದ ವಾರಂಗಲ್‌ಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ನಾಗ್ಪುರ ವಿಜಯವಾಡ ಕಾರಿಡಾರ್, ಕರಿಂನರಗ 4 ಲೇನ್ ರಸ್ತೆ ಶಂಕುಸ್ಥಾಪನೆ ಸೇರಿದಂತೆ ಹಲವು ಯೋಜನಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇನ್ನು ವಾರಂಗಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮತ್ತೆ ಅಲ್ಲಿಂದ ರಾಜಸ್ಥಾನದ ಬಿಕಾನೆರ್‌ಗೆ ತೆರಳಿಲಿರುವ ಮೋದಿ, ಕೆಲ ಯೋಜನೆಗಳ ಶಂಕುಸ್ಥಾಪನೆ ಹಾಗೂ ಹಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.ಗ್ರೀನ್ ಎನರ್ಜಿ ಕಾರಿಡಾರ್, ಅಂತರ್ ರಾಜ್ಯ ಟ್ರಾನ್ಸ್‌ಮಿಷನ್ ಲೈನ್ ಯೋಜನೆ ಉದ್ಘಾಟಿಸಲಿದ್ದಾರೆ. ಬಿಕಾನೆರ್ ರೈಲ ನಿಲ್ದಾಣದ ಪುನರಾಭಿವೃದ್ದಿಗೆ ಅಡಿಪಾಯ ಹಾಕಲಿದ್ದಾರೆ. ಬಿಕಾನೆರ್‌ನಲ್ಲಿ ಮೋದಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಮವಾಗಿ ಬಿಕಾನೆರ್‌ನಿಂದ ಮರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.