ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಶ್ರೀರಾಮನ 40 ಅಡಿ ಕಟೌಟ್ ನೆಲಕ್ಕೆ ಉರುಳಿ ಬಿದ್ದಿದ್ದು, ಕಿಡಿಗೇಡಿಗಳ ಕೃತ್ಯ ಎನ್ನುವ ಅನುಮಾನ ಮೂಡಿದೆ.
ನಂದಿನಿ ಲೇಔಟ್‌ನ ಕೃಷ್ಣಾನಂದ ನಗರದಲ್ಲಿ ನಿಲ್ಲಿಸಲಾಗಿದ್ದ 40 ಅಡಿ ಎತ್ತರದ ಕಟೌಟ್ ಇದ್ದಕ್ಕಿದ್ದಂತೆಯೇ ರಾತ್ರಿ 12:30 ರ ಸುಮಾರಿಗೆ ಉರುಳಿ ಬಿದ್ದಿದೆ.
ಜೋರು ಗಾಳಿಗೆ ಉರುಳಿ ಬಿದ್ದಿದೆಯಾ ಅಥವಾ ಕಿಡಿಗೇಡಿಗಳು ಬೇಕಂತಲೇ ಮಾಡಿದ್ದಾರಾ ಎನ್ನುವ ಬಗ್ಗೆ ಮಾಹಿತಿ ದೊರೆತಿಲ್ಲ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಗಾಳಿಗೆ ಬಿದ್ದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಸ್ಥಳದಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತೇವೆ. ಅದೃಷ್ಟವೆಂದರೆ ಕಟೌಟ್ ಬೀಳುವ ಸಮಯದಲ್ಲಿ ಯಾವುದೇ ವಾಹನಗಳು ಓಡಾಡುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.