ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ಅಪಘಾತದಲ್ಲಿ ೨೫೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 40 ಮಂದಿಯ ಮೃತದೇಹಗಳಲ್ಲಿ ಒಂದೇ ಒಂದು ಗಾಯದ ಗುರುತೂ ಕೂಡ ಇಲ್ಲದಂತಾಗಿದೆ. ಇವರೆಲ್ಲರೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದ ವೇಳೆ ಮೇಲಿದ್ದ ಕೇಬಲ್ ರೈಲಿನ ಮೇಲೆ ಬಿದ್ದು, ಕರೆಂಟ್ ಎಲ್ಲೆಡೆ ವ್ಯಾಪಿಸಿತ್ತು. ಘರ್ಷಣೆ ಹಾಗೂ ವಿದ್ಯುತಾಘಾತದಿಂದ ಅನೇಕರು ಮೃತಪಟ್ಟಿದ್ದಾರೆ. ಮೃತದೇಹದ ಮೇಲೆ ಒಂದು ಸಣ್ಣ ಗಾಯವೂ ಇಲ್ಲ, ಒಂದು ಹನಿ ರಕ್ತವೂ ಬಂದಿಲ್ಲ ಎನ್ನಲಾಗಿದೆ.
ಅಪಘಾತದಲ್ಲಿ 275 ಮಂದಿ ಮೃತಪಟ್ಟಿದ್ದು, 101 ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಕೆಲವು ದೇಹಗಳು ನಜ್ಜುಗುಜ್ಜಾಗಿದ್ದು, ಇನ್ನೂ ಹಲವು ಮೃತದೇಹಗಳ ಮುಖಕ್ಕೆ ಗಾಯಗಳಾಗಿದ್ದು ಗುರುತು ಸಿಗುತ್ತಿಲ್ಲ ಎನ್ನಲಾಗಿದೆ.