ಮಕ್ಕಳ ಕೈಯಲ್ಲಿ ಏನು ಕೊಟ್ಟರೂ ಸಮಸ್ಯೆ ತಪ್ಪಿದ್ದಲ್ಲ, ಜ್ಯೂಸ್‌ ಬಾಟಲ್‌ ಮುಚ್ಚುಳ ನುಂಗಿ ಮಗು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಗುವಳ್ಳಿಯಲ್ಲಿ ನಡೆದಿದೆ.

ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಅವರ ಮಗು ಜ್ಯೂಸ್‌ ಬಾಟಲಿಯಲ್ಲಿ ಆಟವಾಡುತ್ತಿದ್ದು, ಸ್ವಲ್ಪ ಸಮಯದ ನಂತರ ಕ್ಯಾಪ್‌ನ್ನು ಬಾಯಿಗೆ ಹಾಕಿಕೊಂಡಿದೆ. ದೊಡ್ಡ ವಸ್ತುವಾದ್ದರಿಂದ ಮಗು ನುಂಗಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುವುದರಲ್ಲಿ ಮಗು ಮುಚ್ಚುಳ ನುಂಗಿ ಕ್ಷಣಮಾತ್ರದಲ್ಲಿ ಪ್ರಾಣಬಿಟ್ಟಿದೆ.

ಒಂದೂವರೆ ವರ್ಷದ ಕಂದಮ್ಮನನ್ನು ಕಳೆದುಕೊಂಡ ಪೋಷಕರು ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!