Monday, October 13, 2025

ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ಹಥಿನಿಕುಂಡ್ ಬ್ಯಾರೇಜ್‌ನ ಎಲ್ಲಾ 18 ಗೇಟ್‌ ಓಪನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಮುನಾ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ, ಹಥಿನಿಕುಂಡ್ ಬ್ಯಾರೇಜ್‌ನ ಎಲ್ಲಾ ಹದಿನೆಂಟು ಗೇಟ್‌ಗಳನ್ನು ತೆರೆಯಲಾಯಿತು. ಈ ಋತುವಿನಲ್ಲಿ ಮೊದಲ ಬಾರಿಗೆ ಬ್ಯಾರೇಜ್ ಗೇಟ್‌ಗಳನ್ನು ತೆರೆಯಲಾಗಿದೆ.

ಭಾರೀ ಮಳೆಯಿಂದಾಗಿ ನದಿಗೆ 1.78 ಲಕ್ಷ ಕ್ಯೂಸೆಕ್ ನೀರು ಬಂದಿದ್ದು, ಇದರ ಪರಿಣಾಮವಾಗಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಗರ್ಗ್ ಮಾಹಿತಿ ನೀಡಿದರು.

ಇದಕ್ಕೂ ಮೊದಲು, ಭಾರತ ಹವಾಮಾನ ಇಲಾಖೆ ಹರಿಯಾಣ ಮತ್ತು ಪಂಜಾಬ್‌ಗೆ ತಹಸಿಲ್ ಮಟ್ಟದ ಅಧಿಸೂಚನೆಯನ್ನು ಹೊರಡಿಸಿದ್ದು, ಭಾನುವಾರ ಮಧ್ಯಾಹ್ನದವರೆಗೆ ಹಲವಾರು ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ವಿವಿಧ ತೀವ್ರತೆಯ ಮಳೆಯಾಗುವ ಮುನ್ಸೂಚನೆ ನೀಡಿದೆ.

ಹರಿಯಾಣದಲ್ಲಿ, ಕರ್ನಾಲ್, ಇಂದ್ರಿ, ಥಾನೇಸರ್, ನಿಲೋಖೇರಿ, ರಾಡೌರ್, ಬರಾರಾ, ಜಗಧ್ರಿ ಮತ್ತು ಛಛ್ರೌಲಿ ಭಾಗಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಘರೌಂಡಾ, ಅಸಂದ್, ಕೈತಾಲ್, ನಾರಾಯಣಗಢ, ಪಂಚಕುಲ, ಪೆಹೋವಾ, ಶಹಾಬಾದ್, ಅಂಬಾಲಾ, ಚಂಡೀಗಢ, ಕಲ್ಕಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

error: Content is protected !!