May 1, 2026
Friday, May 1, 2026
spot_img

ನಿವೃತ್ತಿ ಹೊಂದುತ್ತಿರುವ ಸಂಸದರಿಗೆ ಭಾವಪೂರ್ಣ ಬೀಳ್ಕೊಡುಗೆ ಕೊಟ್ಟ ಪ್ರಧಾನಿ ಮೋದಿ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಸಭೆಯಲ್ಲಿ ನಿವೃತ್ತಿ ಹೊಂದುತ್ತಿರುವ 37 ಸದಸ್ಯರಿಗೆ ಪ್ರಧಾನಿ ಮೋದಿ ಭಾವುಕ ಬೀಳ್ಕೊಡುಗೆ ನೀಡಿದ್ದು, ಇಡೀ ಸದನ ಭಾವುಕವಾಗಿದೆ.

ಜ್ಞಾನಕ್ಕಿಂತ ಅನುಭವಕ್ಕೆ ಶಕ್ತಿ ಹೆಚ್ಚು. ಶೈಕ್ಷಣಿಕ ಜ್ಞಾನವು ಸೀಮಿತವಾಗಿರಬಹುದು, ಆದರೆ ಸದಸ್ಯರು ಇಲ್ಲಿ ಕಳೆದ ಸಮಯ ಮತ್ತು ಪಡೆದ ಅನುಭವವು ದೇಶದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ರಾಜ್ಯಸಭೆಯು ಹಿರಿಯರ ಸದನವಾಗಿದ್ದು, ಇಲ್ಲಿನ ಚರ್ಚೆಗಳು ಗುಣಮಟ್ಟದಿಂದ ಕೂಡಿರಬೇಕು. ನಿವೃತ್ತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಈ ಅನುಭವವನ್ನು ಜನರಿಗೆ ತಲುಪಿಸಬೇಕು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ದೇಶದ ಹಿತದೃಷ್ಟಿಯಿಂದ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದನ್ನು ನೆನಪಿಟ್ಟುಕೊಳ್ಳುತ್ತೇನೆ ಎಂದರು.

ರಾಜಕೀಯದಲ್ಲಿ ಪೂರ್ಣ ವಿರಾಮ ಇರೋದಿಲ್ಲ. ಸಂಸತ್‌ ಎಂದರೆ ಮುಕ್ತ ವಿಶ್ವವಿದ್ಯಾಲಯ. ಹೊಸ ಸಂಸದರು ಹಿರಿಯರಿಂದ ಕಲಿಯಬೇಕು. ನಿವೃತ್ತರಾಗುವ ಸದಸ್ಯರು ಆಚೆ ತಮ್ಮ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಬೇಕು ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !