ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಜಿಯೋ ಇನ್ಫೋಕಾಮ್ ಶುಕ್ರವಾರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 28 ರಷ್ಟು ಏರಿಕೆಯನ್ನು ದಾಖಲಿಸಿದ್ದು 4,518 ಕೋಟಿ ರೂ. ಲಾಭ ದಾಖಲಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಅದರ ನಿವ್ವಳ ಲಾಭವು 3528 ಕೋಟಿ ರೂ.ಗಳಷ್ಟಿತ್ತು ಎಂದು ಟೆಲ್ಕೊ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಕಾರ್ಯಾಚರಣೆಗಳ ಆದಾಯವು ತ್ರೈಮಾಸಿಕದಲ್ಲಿ 20.2 ಶೇಕಡ ಜಿಗಿದು 22,521 ಕೋಟಿ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 18,735 ಕೋಟಿ ರೂ. ಇತ್ತು.
ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗುತ್ತಿರೋ ಸಂದರ್ಭದಲ್ಲಿ ಈ ಎರಡನೇ ತ್ರೈಮಾಸಿಕದ ಲಾಭವು ಜಿಯೋದ ಧನಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ ಎನ್ನಲಾಗಿದೆ. ಚೀನಾವನ್ನು ಬಿಟ್ಟರೆ ಜಗತ್ತಿನ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರೋ ಭಾರತದಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನದ ಬಗ್ಗೆ ಪ್ರಸ್ತುತ ಚರ್ಚಿಸಲಾಗುತ್ತಿದ್ದು ಟರ್ಬೋಚಾರ್ಜ್ಡ್ ವೇಗಗಳು, ಲ್ಯಾಗ್-ಫ್ರೀ ಸಂಪರ್ಕ ಮತ್ತು ಹೊಸ-ಯುಗದ ಅಪ್ಲಿಕೇಶನ್‌ಗಳ ನವಯುಗದಲ್ಲಿ ಈ ಸ್ಕೋರ್ ಕಾರ್ಡ್ ಜಿಯೋದ ಬೆಳವಣಿಗೆಯನ್ನು ಸೂಚಿಸುವಂತಿದೆ.
ಈ ತಿಂಗಳ ಆರಂಭದಲ್ಲಿ, Jio ತನ್ನ 5G ಸೇವೆಗಳ ಬೀಟಾ ಪ್ರಯೋಗವನ್ನು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿಯ ನಾಲ್ಕು ನಗರಗಳಲ್ಲಿ ಅಕ್ಟೋಬರ್ 5 ರಿಂದ ಆಯ್ದ ಗ್ರಾಹಕರೊಂದಿಗೆ ಪ್ರಾರಂಭಿಸಿದೆ.