ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಮೂರು ವರ್ಷಗಳಲ್ಲಿ 475 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುವ ಯೋಜನೆ ಜಾರಿಯಲ್ಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು, 2026 ರ ವೇಳೆಗೆ ಬುಲೆಟ್ ರೈಲುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ ಎಂದಿದ್ದಾರೆ.
ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ 138 ನಿಲ್ದಾಣಗಳಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, 57 ನಿಲ್ದಾಣಗಳಿಗೆ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. 475 ವಂದೇ ಭಾರತ್ ರೈಲುಗಳನ್ನು ಹೊಂದುವ ಗುರಿ ಪ್ರಗತಿಯಲ್ಲಿದೆ. ಕಳೆದ ಬಜೆಟ್‌ನಲ್ಲಿ 400 ರೈಲುಗಳಿಗೆ ಮಂಜೂರಾತಿ ನೀಡಲಾಗಿದ್ದು ಅದಕ್ಕೂ ಮುನ್ನ 75 ರೈಲುಗಳಿಗೆ ಮಂಜೂರಾತಿ ನೀಡಲಾಗಿತ್ತು. ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣ ಗುರಿ ಸಾಧಿಸಲಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಆಗಸ್ಟ್ 2023 ರೊಳಗೆ 75 ಹೊಸ ವಂದೇ ಭಾರತ್ ರೈಲುಗಳು?
ಭಾರತೀಯ ರೈಲ್ವೇ ಮುಂದಿನ ವರ್ಷ ಆಗಸ್ಟ್ 15 ರೊಳಗೆ 75 ಹೊಸ ವಂದೇ ಭಾರತ್ ರೈಲುಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ, ಆದರೆ ಪ್ರಸ್ತುತ ಉತ್ಪಾದನೆಯ ವೇಗವನ್ನು ಅನುಸರಿಸಿ, ಗುರಿಯನ್ನು ಸಾಧಿಸುವುದು ಸವಾಲಾಗಿದೆ.
ಮೂಲ ಯೋಜನೆಯ ಪ್ರಕಾರ, ಐದು ರೈಲುಗಳನ್ನು ನವೆಂಬರ್ 2022 ರಲ್ಲಿ ತಯಾರಿಸಲು ನಿಗದಿಪಡಿಸಲಾಗಿತ್ತು ಮತ್ತು ಏಳು ರೈಲುಗಳು ಡಿಸೆಂಬರ್‌ನಲ್ಲಿ ಸಿದ್ಧವಾಗಬೇಕಿತ್ತು.
ಪ್ರಸ್ತುತ 250 ಸಿಬ್ಬಂದಿಯನ್ನು ವಂದೇ ಭಾರತ್ ಕೋಚ್‌ಗಳ ಫರ್ನಿಶಿಂಗ್ ಕೆಲಸಕ್ಕಾಗಿ ಹಗಲಿರುಳು ನಿಯೋಜಿಸಲಾಗುತ್ತಿದೆ ಎಂದು ಐಸಿಎಫ್ ತಿಳಿಸಿದೆ.