ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಡಕಟ್ಟು ಸಮುದಾಯದವರ ವಿರುದ್ಧ ದಾಖಲಾಗಿರುವ ಸುಮಾರು 48,018 ಪ್ರಕರಣಗಳನ್ನು ರದ್ದುಪಡಿಸಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಆದೇಶಿಸಿದ್ದಾರೆ.
ಹೆಚ್ಚಿನ ಪ್ರಕರಣಗಳು ಅಬಕಾರಿ, ಗೃಹ, ಅರಣ್ಯ ಮತ್ತು ಪರಿಸರ ಇಲಾಖೆಗಳಿಗೆ ಸಂಬಂಧಿಸಿದವುಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರದ್ದುಪಡಿಸಲು ತೀರ್ಮಾನಿಸಿರುವ ಒಟ್ಟು ಪ್ರಕರಣಗಳಲ್ಲಿ 36,581, ಅಬಕಾರಿ ಇಲಾಖೆ ಅಡಿಯಲ್ಲಿ ಬರುತ್ತವೆ. 9,846 ಪ್ರಕರಣಗಳು ಗೃಹ ಹಾಗೂ 1,591 ಪ್ರಕರಣಗಳು ಅರಣ್ಯ ಮತ್ತು ಪರಿಸರ ಇಲಾಖೆಗೆ ಸಂಬಂಧಿಸಿದವುಗಳಾಗಿವೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.
ಇಷ್ಟು ಪ್ರಕರಣಗಳನ್ನು ರದ್ದುಪಡಿಸುವುದರಿಂದ ನ್ಯಾಯಾಲಯಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.