ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯ ದಕ್ಷಿಣ ಪ್ರದೇಶದಲ್ಲಿ ಗುರುವಾರ ರಾತ್ರಿ ಭೂಮಿ ಕಂಪಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ದಾಖಲಾಗಿದೆ. ಭೂಕಂಪದಿಂದಾಗಿ ಅನೇಕ ಕಟ್ಟಡಗಳಿಗೆ ಹಾನಿಯಾಗಿದ್ದು, 23 ಜನರು ಗಾಯಗೊಂಡಿದ್ದಾರೆ.
ಈ ಬಗ್ಗೆ ಈ ಬಗ್ಗೆ ಟರ್ಕಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಭೂಕಂಪದ ಕೇಂದ್ರಬಿಂದು ಮಾಲತ್ಯಾ ಪ್ರಾಂತ್ಯದ ಯೆಸಿಲುರ್ಟ್ ನಗರದಲ್ಲಿ ಕೇಂದ್ರಿಕೃತಗೊಂಡಿತ್ತು. ಅಡಿಯಾಮಾನ್‌ನಲ್ಲಿ ಕೂಡ ಭೂಕಂಪನದ ಅನುಭವವಾಗಿದೆ. ಫೆಬ್ರವರಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ಪ್ರಾಂತ್ಯಗಳು ನಲುಗಿ ಹೋಗಿದ್ದವು. ಭೂಕಂಪನದಿಂದಾಗಿ 50,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು.
ಭೂಕಂಪದ ಕುರಿತು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಮಾಲತ್ಯಾ ಮತ್ತು ಅಡಿಯಾಮಾನ್‌ನಲ್ಲಿ ಕಟ್ಟಡಗಳು ಕುಸಿತಗೊಂಡಿವೆ. ಭೂಕಂಪದಿಂದ ಪಾರಾಗಲು ಜನರು ತಮ್ಮ ಕಟ್ಟಡಗಳಿಂದ ಜಿಗಿಯಲು ಹೋಗಿ ಗಾಯಗೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಭೂಕಂಪನ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.