February 12, 2026
Thursday, February 12, 2026
spot_img

5 ಎಸೆತ, 22 ರನ್, 440 ಸ್ಟ್ರೈಕ್ ರೇಟ್! ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಆಟಗಾರನ ವಿಶ್ವದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಕ್ರಿಕೆಟ್ ಎಂದರೆ ಅಲ್ಲಿ ಅಬ್ಬರದ ಬ್ಯಾಟಿಂಗ್ ನಿರೀಕ್ಷಿಸುವುದು ಸಹಜ. ಆದರೆ ಸ್ಕಾಟ್ಲೆಂಡ್‌ನ ಮೈಕೆಲ್ ಲೀಸ್ಕ್ ಈ ಬಾರಿ ಕ್ರಿಕೆಟ್ ಲೋಕವೇ ಬೆರಗಾಗುವಂತಹ ಹೊಸ ದಾಖಲೆ ಬರೆದಿದ್ದಾರೆ. ಕೇವಲ 5 ಎಸೆತಗಳಲ್ಲಿ ಅವರು ತೋರಿದ ಚರಿತಾಹರ್ ಸ ಪ್ರದರ್ಶನ ಈಗ ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಎಂದು ದಾಖಲಾಗಿದೆ.

ಇಟಲಿ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ಲೀಸ್ಕ್, ಅಕ್ಷರಶಃ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದರು. ಕೇವಲ 5 ಎಸೆತಗಳನ್ನು ಎದುರಿಸಿದ ಅವರು 2 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 22 ರನ್ ಚಚ್ಚಿದರು. ಈ ಮೂಲಕ 440ರ ಭೀಕರ ಸ್ಟ್ರೈಕ್ ರೇಟ್ ದಾಖಲಿಸಿ, ಕನಿಷ್ಠ 20 ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್‌ನ ಡ್ವೇನ್ ಸ್ಮಿತ್ (414.28 ಸ್ಟ್ರೈಕ್ ರೇಟ್) ಹೆಸರಿನಲ್ಲಿತ್ತು. ವಿಶೇಷವೆಂದರೆ, 2007ರಲ್ಲಿ ಇಂಗ್ಲೆಂಡ್ ವಿರುದ್ಧ 6 ಸಿಕ್ಸರ್ ಸಿಡಿಸಿ 362.5 ಸ್ಟ್ರೈಕ್ ರೇಟ್ ಹೊಂದಿದ್ದ ಭಾರತದ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸಹ ಲೀಸ್ಕ್ ಈಗ ಅಳಿಸಿಹಾಕಿದ್ದಾರೆ.

ಈ ಸ್ಫೋಟಕ ಇನ್ನಿಂಗ್ಸ್ ಮೂಲಕ ಮೈಕೆಲ್ ಲೀಸ್ಕ್ ಟಿ20 ವಿಶ್ವಕಪ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕೆತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !