ಹೊಸದಿಗಂತ ಡಿಜಿಟಲ್ ಡೆಸ್ಕ್
ಕನ್ವರ್ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಟ್ರಕ್ ಹರಿದ ಪರಿಣಾಮ 5 ಮಂದಿ ಸ್ಥಳದಲ್ಲೇ ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡ ಬೀಕರ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಹತ್ರಾಸ್ನ ಸದಾಬಾದ್ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ಭಕ್ತರು ಹರಿದ್ವಾರದಿಂದ ಗ್ವಾಲಿಯರ್ಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ಹೇಳಿದ್ದಾರೆ.
ಕನ್ವರ್ ಯಾತ್ರೆ ಎಂಬುದು ಉತ್ತರದ ರಾಜ್ಯಗಳಲ್ಲಿ ವಾರ್ಷಿಕವಾಗಿ ನಡೆಸಲ್ಪಡುವ ಯಾತ್ರೆಯಾಗಿದ್ದು, ಇದರಲ್ಲಿ ಕನ್ವಾರಿಯರು ಅಥವಾ ಯಾತ್ರಿಕರು ಉತ್ತರಾಖಂಡದ ಹಾರ್ದಿವಾರ್, ಗೌಮುಖ ಮತ್ತು ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್ನಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಗಂಗಾನದಿಯ ಪವಿತ್ರ ನೀರನ್ನು ತಂದು ಶಿವನ ಆರಾಧನೆಗೆ ಬಳಸುತ್ತಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ