October 9, 2026
Friday, October 9, 2026
spot_img

5 ಅಡಿ ಎತ್ತರ, 700 ಕೆ.ಜಿ. ತೂಕ: ಬೆಂಗಳೂರಿಗೆ ಬಂದ ‘ಡೈಮಂಡ್ ಗಣೇಶ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಗಣೇಶೋತ್ಸವಕ್ಕೆ ಅದ್ಧೂರಿ ಸಿದ್ಧತೆ ನಡೆದಿದೆ.

ಈ ಬಾರಿ ನಗರದ ಮಿಲ್ಕ್ ಕಾಲೋನಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಗಣೇಶ ಮೂರ್ತಿಯ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಯಾಕೆ ಅಂತೀರಾ? ಈ ಬಾರಿ ಗಣೇಶನಿಗೆ ಅಮೆರಿಕನ್ ಡೈಮಂಡ್, ಮುತ್ತು, ರತ್ನ ಹಾಗೂ ಹವಳಗಳಿಂದ ಅಲಂಕೃತನಾಗಿದ್ದಾನೆ. ಈ ‘ಡೈಮಂಡ್ ಗಣೇಶ’ನಿಗೆ ಬರೋಬ್ಬರಿ 14 ಲಕ್ಷ ರೂ ವೆಚ್ಚವಾಗಿದ್ಯಂತೆ.

ಸುಮಾರು 5 ಅಡಿ ಎತ್ತರದ ಹಾಗೂ 700 ಕೆ.ಜಿ. ತೂಕ ಇರೋ ಈ ಗಣೇಶ ಮೂರ್ತಿಯನ್ನು ಸೊಲ್ಲಾಪುರದ ಕುಶಲಕರ್ಮಿಗಳು ಸುಮಾರು ಮೂರು ತಿಂಗಳ ಕಾಲ ಶ್ರಮಿಸಿ ತಯಾರಿಸಿದ್ದಾರಂತೆ.

ಲೇಪಾಕ್ಷಿ ಶೈಲಿಯ ಭವ್ಯ ಮಂಟಪ

ಇನ್ನು ಗಣೇಶನಿಗಷ್ಟೇ ಅಲ್ಲ, ಆತ ಕುಳಿತುಕೊಳ್ಳುವ ಮಂಟಪಕ್ಕೂ ಭರ್ಜರಿ ಸಿದ್ಧತೆ ಮಾಡಲಾಗಿದೆ. ಸುಮಾರು 16 ಲಕ್ಷ ರೂ ಖರ್ಚು ಮಾಡಿ ಆಂಧ್ರಪ್ರದೇಶದ ಪ್ರಸಿದ್ಧ ಲೇಪಾಕ್ಷಿ ಶೈಲಿಯನ್ನು ಹೋಲುವಂತೆ ಭವ್ಯ ಮಂಟಪ ನಿರ್ಮಾಣ ಮಾಡಲಾಗಿದೆ.

ಹೀಗೆ ಈ ಬಾರಿ ಮಿಲ್ಕ್ ಕಾಲೋನಿಯ ಗಣೇಶೋತ್ಸವದಲ್ಲಿ 14 ಲಕ್ಷ ರೂ.ನ ‘ಡೈಮಂಡ್ ಗಣೇಶ’ ಮತ್ತು 16 ಲಕ್ಷ ರೂ.ನ ಲೇಪಾಕ್ಷಿ ಶೈಲಿಯ ಮಂಟಪ ಭಕ್ತರ ಗಮನ ಸೆಳೆಯಲು ಸಜ್ಜಾಗಿವೆ.

Must Read