5 ಗಂಟೆಗಳ ಸತತ ಕಾರ್ಯಾಚರಣೆ: ಬೋರ್ ವೆಲ್ ಗೆ ಬಿದ್ದ ಮಗುವಿನ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಬೋರ್‌ ವೆಲ್‌ ಗೆ ಬಿದ್ದ ಮಗುವನ್ನು ರಕ್ಷಿಸಲಾಗಿದೆ.

ಸುಮಾರು 5 ಗಂಟೆಗಳ ಕಾಲ ನಡೆಸಿದ ಸತತ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಿಸಲಾಯಿತು . ಮಗು ಚೆನ್ನಾಗಿದ್ದು, ರಕ್ಷಿಸಿದ ಬಳಿಕ ಆಸ್ಪತ್ರೆಗೆ ಕಳುಹಿಸಲಾಗಿದ ಎಂದು ಬಿಹಾರದ ನಳಂದದ ಎನ್‌ಡಿಆರ್‌ಎಫ್ ಅಧಿಕಾರಿ ರಂಜೀತ್ ಕುಮಾರ್ ಹೇಳಿದ್ದಾರೆ.

ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ 3 ವರ್ಷದ ಬಾಲಕ ಶಿವಂ 100 ಅಡಿ ಆಳದ ತೆರೆದ ಬೋರ್‌ ವೆಲ್‌ ಗೆ ಬಿದ್ದು ಸುಮಾರು 40-50 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದನು.

ಬಳಿಕ NDRF ಮತ್ತು ಇತರ ರಕ್ಷಣಾ ತಂಡಗಳು ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಬೋರ್‌ ವೆಲ್‌ ಗೆ ಆಮ್ಲಜನಕ ಪೂರೈಕೆಗೆ ಪೈಪ್ ಅಳವಡಿಸಿ, ಕ್ಯಾಮೆರಾ ಮೂಲಕ ಮಗುವಿನ ಚಲನವಲನ ಗಮನಿಸಿದರು. ಅಂತಿಮವಾಗಿ ಸತತವಾಗಿ ನಡೆದ ರಕ್ಷಣಾ ಕಾರ್ಯಾಚರಣೆ ಫಲ ಕೊಟ್ಟಿದ್ದು, ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!