ದೇಶದ ವಿರುದ್ಧ ಸಂಚು ರೂಪಿಸಿದ್ದ ಐವರು ಜೈಶ್ ಉಗ್ರರಿಗೆ ಜೀವಾವಧಿ ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿ ತರಬೇತಿ ನೀಡುತ್ತಿದ್ದ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಐವರು ಭಯೋತ್ಪಾದಕರಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೈಶ್‌ ಉಗ್ರರಾದ ಸಜ್ಜದ್ ಅಹ್ಮದ್ ಖಾನ್, ಬಿಲಾಲ್ ಅಹ್ಮದ್ ಮಿರ್, ಮುಜಾಫರ್ ಅಹ್ಮದ್ ಭಟ್, ಇಶ್ಫಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್-ಉದ್-ದಿನ್ ಚೋಪಾನ್ ಅವರು ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಬಳಿಕ ವಿಶೇಷ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ಜೈಲು ಶಿಕ್ಷೆಯನ್ನು ವಿಧಿಸಿದರು.
ಈ ಪ್ರಕರಣದಲ್ಲಿ ತನ್ವೀರ್ ಅಹ್ಮದ್ ಗನಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನೂ ನ್ಯಾಯಾಧೀಶರು ವಿಧಿಸಿದ್ದಾರೆ. ಎಲ್ಲಾ ಅಪರಾಧಿಗಳು ಭಾರತದ ವಿರುದ್ಧ ಯುದ್ಧ ಮಾಡಲು ಪಿತೂರಿ ನಡೆಸಿದ್ದರು ಎಂದು ನ್ಯಾಯಾಧೀಶರು ಗಮನಿಸಿದರು.
ಅಪರಾಧಿಗಳು “ಜೆಎಂನ ಸದಸ್ಯರು ಮಾತ್ರವಲ್ಲದೆ ಅವರು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಒದಗಿಸುವ ಮೂಲಕ ಇತರ ಭಯೋತ್ಪಾದಕರು / ಜೆಎಂ ಸದಸ್ಯರಿಗೆ ಬೆಂಬಲ ಹಾಗೂ ಆಶ್ರಯ ನೀಡಿದ್ದರು” ಎಂದು ಅದು ಹೇಳಿದೆ. “ಆರೋಪಿಗಳು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯರನ್ನು ಉಗ್ರಗಾಮಿತ್ವದತ್ತ ಸಾಗಲು ಪ್ರೇರೇಪಿಸುವಲ್ಲಿ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಹಣವನ್ನು ವ್ಯವಸ್ಥೆಗೊಳಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರೆಲ್ಲರೂ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!