ಹೊಸದಿಗಂತ ವರದಿ, ಮಂಡ್ಯ:
ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದುಷ್ಕರ್ಮಿಗಳು ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಕೆ.ಆರ್.ಎಸ್.ನಲ್ಲಿ ನಡೆದಿದೆ.
ಲಕ್ಷ್ಮಿ (26), ರಾಜ್ (12) ಕೋಮಲ್ (7), ಕುನಾಲ್ (4) ಗೋವಿಂದ್ (11) ಎಂಬುವರೇ ಕೊಲೆಯಾದವರಾಗಿದ್ದಾರೆ.
ಗೋಲ್ಡ್ ಕವರಿಂಗ್ ಆಭರಣಗಳನ್ನು ಮಾರಾಟ ಮಾಡುವುದು, ಚಿನ್ನ ಪಾಲೀಷ್ ಮಾಡುತ್ತಾ ಜೀವನ ನಡೆಸುತ್ತಿದ್ದ ಲಕ್ಷ್ಮಿ ಮತ್ತು ಕುಟುಂಬ ನಿನ್ನೆಯೂ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಮನೆಯಲ್ಲಿ ಊಟ ಮಾಡಿ ನೆಮ್ಮದಿಯಾಗಿ ಮಲಗಿದ್ದರು.
ಗಂಡ ಗಂಗಾರಾಂ ಕೆಲಸದ ನಿಮಿತ್ತ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ತನ್ನೂರಿಗೆ ಹೋಗಿದ್ದ. ನಿನ್ನೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ದುಷ್ಕರ್ಮಿಗಳು ಮನೆಯೊಳಗೆ ಪ್ರವೇಶಿಸಿ ಮಾರಕಾಸಗಳಿಂದ ಎಲ್ಲರೂ ಮಲಗಿದ್ದಂತೆಯೇ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆ ಮಾಡಿದವರು ಯಾರು, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲಘಿ. ಘಟನೆಯಿಂದಾಗಿ ಕೆ.ಆರ್.ಎಸ್. ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದುಘಿ, ಸುತ್ತಮುತ್ತಲ ಗ್ರಾಮಸ್ಥರು ಮನೆ ಬಳಿ ಜಮಾಯಿಸಿದ್ದರು. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ವರಿಷ್ಠಾಧಿಕಾರಿ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಇತರೆ ಉನ್ನತ ಪೊಲೀಸ್ ಅಧಿಕಾರಿಗಳು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದುಘಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.