February 24, 2026
Tuesday, February 24, 2026
spot_img

ಕಥೆಯೊಂದ ಹೇಳುವೆ 5 | ಡೀಮೋಟಿವೇಟ್‌ ಮಾಡೋ ಜನರ ಮಾತನ್ನೇ ಮೆಟ್ಟಿಲು ಮಾಡ್ಕೊಳಿ, ಸೇಮ್‌ ಈ ಕತ್ತೆ ಥರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯಸ್ಸಾಗಿರೋ ಒಂದು ಕತ್ತೆ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದು ಬಿಡುತ್ತೆ. ಎಷ್ಟೇ ಟ್ರೈ ಮಾಡಿದ್ರು ಮೇಲೆ ಬರೋಕೆ ಸಾಧ್ಯನೇ ಆಗಿರಲ್ಲ. ಆ ಊರಿನವರೆಲ್ಲ ಎಷ್ಟೇ ಟ್ರೈ ಮಾಡಿದ್ರು ಏನು ಮಾಡೋಕೆ ಆಗಿರಲಿಲ್ಲ. ಕೊನೆಗೆ ಊರಿನ ಜನರೆಲ್ಲ ಸೇರಿ ಹೇಗಿದ್ರು ಕತ್ತೆಗೆ ವಯಸ್ಸಾಗಿದೆ ಹೀಗಾಗಿ ಆ ಹಾಳು ಬಾವಿಗೆ ಮಣ್ಣು ಹಾಕಿ ಕತ್ತೆಯನ್ನು ಕೂಡ ಮುಚ್ಚಿ ಹಾಕೋಣ ಅಂತ ನಿರ್ಧಾರ ಮಾಡುತ್ತಾರೆ.

ಎಲ್ಲರು ಹಾರೆ, ಬುಟ್ಟಿ ತಂದು ಮಣ್ಣು ಅಗೆದು, ಆ ಹಾಳು ಬಾವಿಯನ್ನು ತುಂಬಿಸೋಕೆ ಶುರು ಮಾಡ್ತಾರೆ. ಕತ್ತೆಗೆ ಏನೂ ಅರ್ಥನೇ ಆಗೋದಿಲ್ಲ. ಅದಕ್ಕೂ ಬೇರೆ ದಾರಿ ಕಾಣದೆ ಮಣ್ಣು ಹಾಕೋದನ್ನೇ ಸುಮ್ಮ್ನೆ ನಿಂತು ನೋಡುತ್ತೆ. ಪ್ರತಿ ಸಲ ಮಣ್ಣು ಹಾಕೋವಾಗ ಕತ್ತೆ ಆ ಮಣ್ಣಿನ ಮೇಲ್ಗಡೆ ಬಂದು ನಿಂತುಕೊಳ್ಳುತ್ತೆ. ಪ್ರತಿ ಬಾರಿಯೂ ಇದೆ ರೀತಿ ಆದಾಗ ಕತ್ತೆ ಕೂಡ ಮಣ್ಣಿನ ಮೇಲೆ ಮೇಲೆ ಹತ್ತಿ ಬಾವಿಯ ಮೇಲ್ಗಡೆ ಬಂದು ಹೊರಹೋಗಿ ಬಿಡುತ್ತೆ.

ಈ ಕಥೆಯಿಂದ ನಾವು ತಿಳ್ಕೊಬೇಕಾಗಿರೋದು ಏನಂದ್ರೆ ನಮ್ಮ ಜೀವನದಲ್ಲೂ ಕೂಡ ನಾವು ಮಾಡೋ ಕೆಲಸಕ್ಕೆ ನಮ್ಮನ್ನ ಡಿಮೋಟಿವೇಟ್ ಮಾಡೋಕೆ ಜನ ಕಾಯ್ತಿರುತ್ತಾರೆ. ಆದ್ರೆ ನಾವು ಅರ್ಥ ಮಾಡಿಕೊಳ್ಳಬೇಕು ಅವರ ಮಾತಿನಿಂದ ನಾವು ಡೀಮೋಟಿವೇಟ್‌ ಆಗ್ಬೇಕಾ ಅಥವಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬೆಳಿಬೇಕಾ ಅಂತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !