ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿಗಳ ಜೆನೆರಿಕ್ ಔಷಧ ಮಾರಾಟ ಮಾಡುವ ಮೂಲಕ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹೊಸ ದಾಖಲೆ ಬರೆದಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದ್ದು, 2014ರಲ್ಲಿ ದೇಶದಲ್ಲಿ ಇದ್ದ ಜೆನೆರಿಕ್ 80 ಕೇಂದ್ರಗಳು ಈಗ ಬರೋಬ್ಬರಿ ಹತ್ತು ಸಾವಿರಗಳಿಗೆ ಏರಿದೆ. 785 ಜಿಲ್ಲೆಗಳಿಗೆ ಇದು ವಿಸ್ತರಣೆಯಾಗಿದೆ. ಜನತೆ ಜೆನೆರಿಕ್ ಕೇಂದ್ರಗಳಲ್ಲಿ ಔಷಧ ಖರೀದಿಸುವ ಮೂಲಕ ಈ ವರ್ಷದಲ್ಲಿ ಬರೋಬ್ಬರಿ ಐದು ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ತಿಳಿಸಿದೆ.
2026ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಇರುವ ಜೆನೆರಿಕ್ ಕೇಂದ್ರಗಳ ಸಂಖ್ಯೆಯನ್ನು 25 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನೂ ಕೇಂದ್ರ ಸರ್ಕಾರ ಹೊಂದಿದೆ.