ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲದ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಮಾರುಕಟ್ಟೆ ನಿಯಂತ್ರಕ ಸೆಬಿ ನಿಷೇಧಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್‌ನ ಮಾಜಿ ಅಧಿಕಾರಿಗಳು ಸೇರಿದಂತೆ ಒಟ್ಟು 24 ಉದ್ಯಮಿಗಳನ್ನು ಸೆಕ್ಯೂರೆಟೀಸ್ ಮಾರ್ಕೆಟ್ನಿಂದ ನಿಷೇಧ ಮಾಡಲಾಗಿದೆ. ಅನಿಲ್ ಅಂಬಾನಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಐದು ವರ್ಷಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಸಹಭಾಗಿತ್ವವನ್ನು ನಿಷೇಧಿಸಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಆರು ತಿಂಗಳ ಕಾಲ ನಿಷೇಧಿಸಿ, ದಂಡ ವಿಧಿಸಿದೆ.
ನಿಷೇಧದ ಅವಧಿಯಲ್ಲಿ ಅವರು ಸೆಬಿಯಲ್ಲಿ ನೋಂದಾಯಿತ ಯಾವುದೇ ಮಧ್ಯವರ್ತಿ, ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಸೇರಲು ಸಾಧ್ಯವಿಲ್ಲ. ಈ ಬೆನ್ನಲ್ಲೇ ಅನಿಲ್ ಅಂಬಾನಿ ಸಮೂಹ ಷೇರುಗಳಲ್ಲಿ ಭಾರೀ ಕುಸಿತ ಆಗಿದೆ. ಶೇಕಡಾ 14 ರಷ್ಟು ಷೇರು ಕುಸಿತವಾಗಿದೆ ಎಂದು ವರದಿಯಾಗಿದೆ.