ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಜೂನ್.11 ರಿಂದ ಆರಂಭಗೊಂಡ ಈ ಯೋಜನೆ, ಜೂನ್.13ರಂದು ಮೂರನೆ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನಂದು ಬರೋಬ್ಬರಿ 51.52 ಲಕ್ಷ ಮಹಿಳೆಯರು ಸಂಚರಿಸಿದ್ದಾರೆ.
ಇಂದು ಕೆಎಸ್‌ಆರ್‌ಟಿಸಿ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 13-06-2023ರಂದು KSRTC ಬಸ್ಸಿನಲ್ಲಿ 13,97,665, BMTC ಬಸ್ಸಿನಲ್ಲಿ 20,56,856, NWKRTCಯಲ್ಲಿ 11,08,930 ಮಹಿಳೆಯರು ಹಾಗೂ KKRTC ಸಾರಿಗೆ ಬಸ್ಸುಗಳಲ್ಲಿ 5,89,318 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದೆ.
ಮೂರನೇ ದಿನವಾದ ನಿನ್ನೆ ಸಾರಿಗೆ ಬಸ್ಸುಗಳಲ್ಲಿ ಒಟ್ಟು 1,16,66,621 ಮಂದಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇವರಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರು ಬರೋಬ್ಬರಿ 51,52,769 ಆಗಿದ್ದಾರೆ. ಇದಕ್ಕಾಗಿ 10,82,02,191 ಹಣ ಖರ್ಚಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.