SHOCKING | ರಾಜಧಾನಿ ಬೆಂಗಳೂರಿನಲ್ಲಿ 24 ಗಂಟೆ ಅವಧಿಯಲ್ಲಿ 51 ಮಂದಿ ಅಪಘಾತದಲ್ಲಿ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಧಾನಿ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಎಲ್ಲ ರೀತಿಯ ನಿಯಮಗಳನ್ನು ಗಾಳಿಗೆ ತೂರುವ ಜನರಿಂದ ಅಘಾತಗಳು ಸಂಭವಿಸುತ್ತಿವೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ 51 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಬಗ್ಗೆ ಟ್ವೀಟ್​ ಮಾಡಿದ ಅವರು, ಭಾನುವಾರ ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 51 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಈ ಪೈಕಿ ಹಲವು ಪ್ರಕರಣಗಳು ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ಸಂಭವಿಸಿದೆ. ರಸ್ತೆ ಸುರಕ್ಷತೆಗೆ ಎಲ್ಲ ಪಾಲುದಾರರಿಂದ ಜವಾಬ್ದಾರಿಯುತ ನಡವಳಿಕೆಯ ಅಗತ್ಯವಿದೆ ಎಂದರು.

ಅಪಘಾತ ಸಂಭವಿಸುವುದು ಹೇಗೆ?

ಅತಿಯಾದ ವೇಗ
ಅಸಮರ್ಪಕವಾದ ರೀತಿಯಲ್ಲಿ ಓವರ್‌ಟೇಕ್‌ ಮಾಡುವುದು.
ಮದ್ಯಪಾನ ಮಾಡಿ ವಾಹನ ಚಲಾಯಿಸುವುದು.
ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ಗಾಡಿಯಲ್ಲಿ ಕೂರಿಸುವುದು.
ಸರಿಯಾಗಿ ಗಾಡಿ ಓಡಿಸಲು ಬಾರದೇ ರಸ್ತೆಗೆ ಇಳಿಯುವುದು.
ವಾಹನ ಓಡಿಸುವಾಗ ಸುಸ್ತು, ನಿದ್ದೆ, ಅನಾರೋಗ್ಯ.
ಸೀಟ್‌ ಬೆಲ್ಟ್‌ ಧರಿಸದೇ ಇರುವುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!