ಇಂದು ಅನಾವರಣಗೊಳಲ್ಲಿದೆ 54 ಅಡಿ ಎತ್ತರದ ಹನುಮನ ಮೂರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗುಜರಾತಿನ ಬೊಟಾಡ್ ಜಿಲ್ಲೆಯ ಸಲಂಗ್‌ಪುರ ಪಟ್ಟಣದಲ್ಲಿ ಭಗವಾನ್ ಹನುಮನ ಮೂರ್ತಿಯನ್ನು ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್‌ ಶಾ ಇಂದು ಅನಾವರಣಗೊಳಿಸಲಿದ್ದಾರೆ.

54 ಅಡಿ ಎತ್ತರದ 30,000 ಕೆಜಿ ಪಂಚಧಾತು ವಸ್ತುಗಳಿಂದ ನಿರ್ಮಾಣವಾಗಿರುವ ಮೂರ್ತಿಯನ್ನು ಅಮಿತ್‌ ಶಾ ಅನಾವರಣ ಮಾಡಲಿದಾರೆ. ಈ ಯಾತ್ರಾ ಸ್ಥಳದ ಭೋಜನ ಶಾಲೆಯನ್ನು ಕೂಡ ಉದ್ಘಾಟಿಸಲಿದ್ದಾರೆ.

ಮೂರ್ತಿಯು ಮುಂಭಾಗದಲ್ಲಿ ಉದ್ಯಾನವನವನ್ನು ಹೊಂದಿದ್ದು, 1500 ಪ್ರೇಕ್ಷಕರಿಗೆ ಒಂದು ಆಂಫಿಥಿಯೇಟರ್ ಜೊತೆಗೆ ಬೆಳಕು ಮತ್ತು ಧ್ವನಿ ಪ್ರದರ್ಶನ, ಕಾರಂಜಿ ಕೂಡ ಒಳಗೊಂಡಿದೆ. ಮೂರ್ತಿಯನ್ನು ರಾಜಸ್ಥಾನ ಮೂಲದ ಕಲಾವಿದ ನರೇಶ್‌ಭಾಯ್ ಕುನಾವತ್ ರಚಿಸಿದ್ದಾರೆ. ಇದನ್ನು ಸಲಂಗ್‌ಪುರದ ರಾಜ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

40 ಕೋಟಿ ವೆಚ್ಚದಲ್ಲಿ ಮಂದಿರದಲ್ಲಿ 7 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಭೋಜನಾಲಯದಲ್ಲಿ ಏಕಕಾಲಕ್ಕೆ 5 ಸಾವಿರ ಮಂದಿ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!