ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ದೌಸಾದಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕನನ್ನು 55 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಹೊರಗೆ ತೆಗೆದರೂ ಪ್ರಾಣ ಉಳಿಯಲಿಲ್ಲ. 150 ಅಡಿ ಆಳದ ಬೋರ್‌ವೆಲ್‌ಗೆ ಆತ ಬಿದ್ದಿದ್ದ, 5 ವರ್ಷದ ಬಾಲಕನನ್ನು ಆರ್ಯನ್ ಎಂದು ಗುರುತಿಸಲಾಗಿದೆ.
ಆತನನ್ನು ಹೊರ ತೆಗೆಯುವಷ್ಟರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ತಂದೆ ಹಾಲಿನ ಬಾಟಲಿ ಹಿಡಿದು ಮಗನ ಬರುವಿಕೆಗಾಗಿ ಕಾದಿದ್ದರು ಆದರೆ ಬದುಕಿ ಬರಲೇ ಇಲ್ಲ.
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದ ಗದ್ದೆಯಲ್ಲಿ ಆಟವಾಡುತ್ತಿದ್ದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ. ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಮಗುವನ್ನು ತಲುಪಲು ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಸಮಾನಾಂತರ ಹೊಂಡವನ್ನು ತೆಗೆಯಲಾಯಿತು.
ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಅಸಂಖ್ಯಾತ ಸವಾಲುಗಳಿವೆ ಎಂದು ಹೇಳಿದ್ದರು ನೀರಿನ ಮಟ್ಟ ಸುಮಾರು 160 ಅಡಿ ಎಂದು ಅಂದಾಜಿಸಲಾಗಿದೆ.