RAPE | 5ನೇ ತರಗತಿ ಬಾಲಕಿ ಮೇಲೆ ಮುಖ್ಯಶಿಕ್ಷಕನಿಂದಲೇ ಅತ್ಯಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಖ್ಯಶಿಕ್ಷಕನೇ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ ಹೇಯಕೃತ್ಯ ಕಲಬುರಗಿಯ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ಶಾಲೆಯ 11 ವರ್ಷದ ಬಾಲಕಿ ಸಂತ್ರಸ್ತೆ. ಕಳೆದ 2-3 ದಿನದ ಹಿಂದೆಯೇ ಶಾಲೆಯಲ್ಲಿ ಬಾಲಕಿಯನ್ನು ಪುಸಲಾಯಿಸಿ ಹಾಜಿ ಮಲಂಗ್ ಅತ್ಯಾಚಾರ ಎಸಗಿದ್ದು, ಈ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಸಹ ಹಾಕಿದ್ದಾನೆ. ಬಾಲಕಿ ಪಕ್ಕದ ಮನೆಯವರ ಮುಂದೆ ಶಾಲೆಯಲ್ಲಿ ನಡೆದ ಘಟನೆ ವಿವರಿಸಿದ್ದಾಳೆ.

ಪಕ್ಕದ ಮನೆಯವರು ಕೂಡಲೇ ಬಾಲಕಿಯ ತಂದೆ-ತಾಯಿಗೆ ವಿಷಯ ತಿಳಿಸಿದ್ದು, ಬಂಜಾರಾ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಸೋಮವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಘಟನೆ ಖಂಡಿಸಿ ಪ್ರತಿಭಟನೆ ನಡೆಯಿತು. ಶಾಸಕ ಡಾ.ಅಜಯಸಿಂಗ್, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!