ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಮೆಕ್ಸಿಕೋದ ಕರಾವಳಿಯಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ದಾಖಲಾಗಿದೆ. ಸೋಮಾವಾರ ಬೆಳಗಿನ ಜಾವ 2 ಗಂಟೆಗೆ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ ಹತ್ತು ಕಿಲೋಮೀಟರ್ ಆಳದಲ್ಲಿ ಕಂಡುಬಂದಿದೆ. ಭೂಮಿ ಕಂಪಿಸಿದ ಶಬ್ಧ ಕೇಳಿ ಜನ ಮನೆಯಿಂದ ಓಡಿಬಂದಿದ್ದಾರೆ.
ಭೂಕಂಪದ ನಂತರ ಯುಎಸ್ ವೆಸ್ಟ್ ಕೋಸ್ಟ್, ಬ್ರಿಟಿಷ್ ಕೊಲಂಬಿಯಾ ಅಥವಾ ಅಲಾಸ್ಕಾಕ್ಕೆ ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆ ಹೇಳಿದೆ.
ಸಾವು-ನೋವುಗಳ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.
ಕಳೆದ ವಾರ, ಜೂನ್ 16 ರಂದು ದಕ್ಷಿಣ ಪೆಸಿಫಿಕ್ ಮಹಾಸಾಗರದ ಟೊಂಗಾ ಬಳಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ.