ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲಂಬಿಯಾದ ರಾಜಧಾನಿ ಬೊಗೋಟಾದಲ್ಲಿ ಭೂಮಿ ಕಂಪಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೊಲಂಬಿಯಾದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು, ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ.
ಕಂಪನ ಬಿಂದುವನ್ನು 40 ಕಿ.ಮೀ. ಆಳದಲ್ಲಿ ಗುರುತಿಸಲಾಗಿದೆ.
ಘಟನೆ ಸಂಭವಿಸಿದಾಗ ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಮನೆಯಿಂದ ಹೊರಗೆ ಓಡಲಾರಂಭಿಸಿದ್ದಾರೆ. ಅದೇ ವೇಳೆ ಮಹಿಳೆಯೊಬ್ಬರು 10ನೇ ಮಹಡಿಯ ಕಿಟಕಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ರಾಜಧಾನಿಯ ಮೇಯರ್ ಕ್ಲೌಡಿಯಾ ಲೋಪೆಜ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.