ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ.
10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ ಎಂದು EMSC ತಿಳಿಸಿದೆ. ಈ ಭೂಕಂಪದಿಂದ ಯುಎಸ್ ವೆಸ್ಟ್ ಕೋಸ್ಟ್, ಬ್ರಿಟಿಷ್ ಕೊಲಂಬಿಯಾ ಅಥವಾ ಅಲಾಸ್ಕಾಕ್ಕೆ ಸುನಾಮಿ ಅಪಾಯವಿಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ಸಂಸ್ಥೆ ಹೇಳಿದೆ.