April 13, 2026
Monday, April 13, 2026
spot_img

ಹಿಟ್‌ & ರನ್‌ಗೆ 6 ವರ್ಷದ ಬಾಲಕಿ ಬಲಿ, ಒಬ್ರೂ ಸಹಾಯಕ್ಕೆ ಬರಲಿಲ್ಲ ಎಂದು ಕಣ್ಣೀರಿಟ್ಟ ಅಜ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯಲ್ಲಿ ಹಿಟ್‌ ಆಂಡ್‌ ರನ್‌ಗೆ ಆರು ವರ್ಷದ ಬಾಲಕಿ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ಅಜ್ಜಿ ಹಾಗೂ ಮೊಮ್ಮಗಳು ಇ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರ್‌ ಆಟೋಗೆ ಗುದ್ದಿದೆ.

ಆಗ ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಮಗು ತೀವ್ರವಾಗಿ ಗಾಯಗೊಂಡಿದೆ. ಅಜ್ಜಿಯೂ ಗಾಯಗೊಂಡಿದ್ದಾರೆ. ರಕ್ತ ಸೋರುತ್ತಿದ್ದ ಮೊಮ್ಮಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿ ಎಂದು ಅಜ್ಜಿ ಅಂಗಲಾಚಿದ್ದಾರೆ. ಆದರೆ ಯಾರೂ ಮುಂದೆ ಬಂದಿಲ್ಲ.

ಕೆಲ ಸಮಯದ ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಮಾನವೀಯತೆಯೇ ಇಲ್ಲದಂತೆ ಒಂದು ಜೀವ ಒದ್ದಾಡುವುದನ್ನು ನೋಡುತ್ತಾ, ವಿಡಿಯೋ ಮಾಡುತ್ತಾ ನಿಂತಿದ್ದ ಜನ ಸಹಾಯಕ್ಕೆ ಬರಲಿಲ್ಲ. ಸಹಾಯಕ್ಕೆ ಬಂದು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರೆ ಬದುಕುತ್ತಿದ್ದಳೇನೋ ಎಂದು ಮನೆಯವರು ಕಣ್ಣೀರಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !