July 24, 2026
Friday, July 24, 2026
spot_img

SHOCKING | ದುಡ್ಡಿಗಾಗಿ ಜ್ಯೂನಿಯರ್‌ನ್ನು ಕಿಡ್ನ್ಯಾಪ್‌ ಮಾಡಿ ಸಿಕ್ಕಿಬಿದ್ದ ಸೀನಿಯರ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಣಕ್ಕಾಗಿ ನ್ಯೂನಿಯರ್‌ ವಿದ್ಯಾರ್ಥಿಯೊಬ್ಬನನ್ನು ಸೀನಿಯರ್ಸ್‌ ಕಿಡ್ನ್ಯಾಪ್‌ ಮಾಡಿದ್ದಾರೆ.

ಈ ಘಟನೆ ಬೆಂಗಳೂರಿನ ಪ್ರಸಿದ್ಧ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಐವರು ವಿದ್ಯಾರ್ಥಿಗಳನ್ನು ಮಡಿವಾಳ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯನ್ನು ಒಡಿಶಾ ಮೂಲದ 19 ವರ್ಷದ ರಿಷಭ್ ಮೊಹಂತಿ ಎಂದು ಗುರುತಿಸಲಾಗಿದೆ. ಇನ್ನು ಕೇರಳದ ಶೌರ್ಯ, ಜಯನಗರದ ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್ ಹಾಗೂ ಮಹಾರಾಷ್ಟ್ರದ ಅದಿತಾ ರಾಕ್ಸಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಮೂವರು ಮತ್ತು ಸಂತ್ರಸ್ತ ವಿದ್ಯಾರ್ಥಿ ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಒಂದೇ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು ಎಂಬುದು ತಿಳಿದುಬಂದಿದೆ.

ರಿಷಭ್‌ ಮೊಹಂತಿ ಸಾಲ ತೆಗೆದುಕೊಂಡಿದ್ದ ಆದರೆ ವಾಪಾಸ್‌ ಕೊಡುತ್ತಿರಲಿಲ್ಲ. ಹೀಗಾಗಿ ಆತನನ್ನು ಕಾರಲ್ಲಿ ಕರೆದುಕೊಂಡು ಹೋಗಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !